ನ.29: ಬಂಟ್ವಾಳ-ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ
ಬಂಟ್ವಾಳ, ನ. 27: ಕಾಂಗ್ರೆಸ್ ಪಕ್ಷದ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯಾಗಿದ್ದು, ಪದಗ್ರಹಣ ಸಮಾರಂಭ ನ.29ರಂದು ಬೆಳಗ್ಗೆ ಬಂಟ್ವಾಳ ಜೋಡುಮಾರ್ಗ ಉದ್ಯಾನವನ ಸಮೀಪದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬೇಬಿ ಕುಂದರ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸುದೀಪ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕರಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ವಹಿಸಲಿದ್ದು, ಮಾಜಿ ಶಾಸಕ ಗೋಪಾಲ ಭಂಡಾರಿ ಮತ್ತು ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಭಾಷಣಕಾರರಾಗಿ ಭಾಗವಹಿಸುವರು. ರಮಾನಾಥ ರೈ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಪ್ರಮುಖರಾದ ವಿನಯ ಕುಮಾರ್ ಸೊರಕೆ, ಐವನ್ ಡಿಸೋಜ, ಯು.ಬಿ.ವೆಂಕಟೇಶ್, ಬಿ.ಎಚ್.ಖಾದರ್, ರಾಜಶೇಖರ ಕೋಟ್ಯಾನ್, ಎಂ.ಎಸ್.ಮುಹಮ್ಮದ್, ಮಮತಾ ಗಟ್ಟಿ, ಮಿಥುನ್ ರೈ, ಶಾಲೆಟ್ ಪಿಂಟೋ, ಶೇಖರ್ ಕುಕ್ಕೇಡಿ, ಅಬ್ದುಲ್ ರವೂಫ್ ಮತ್ತು ಟಿ.ಪ್ರವೀಣ್ ಚಂದ್ರ ಆಳ್ವ ಭಾಗವಹಿಸುವರು ಎಂದು ಬಂಟ್ವಾಳ-ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಕಟನೆ ತಿಳಿಸಿದೆ.