ಕೊಣಾಜೆ: ತಾ.ಪಂ. ಮಾಜಿ ಸದಸ್ಯ ಇಬ್ರಾಹೀಂ ಮಂಜನಾಡಿ ನಿಧನ

ಕೊಣಾಜೆ, ನ. 27: ಮಾಜಿ ತಾಲೂಕು ಪಂಚಾಯತ್ ಸದಸ್ಯ ಇಬ್ರಾಹೀಂ ಮಂಜನಾಡಿ (42) ಹೃದಯಾಘಾತದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಇಬ್ರಾಹೀಂ ಅವರು ಶನಿವಾರ ತನ್ನ ತಂಗಿಯ ಮಕ್ಕಳ ಮದುವೆಗೆಂದು ದೇರಳಕಟ್ಟೆಗೆ ಬಂದವರು ಸೋಮವಾರ ಸಂಜೆ ಮೈಸೂರಿಗೆ ತೆರಳಿದ್ದರು. ಅಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಸಂಜೆ ಹೃದಯಾಘಾತದಿಂದ ಅವರು ನಿಧನರಾದರು.
Next Story





