ಜೆಪ್ಪು: ಜಮೀಯ್ಯತುಲ್ ಫಲಾಹ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ಮಂಗಳೂರು, ನ.27: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ, ಸೌತ್ ವೆಲ್ಫೇರ್ ಅಸೋಸಿಯೇಶನ್ ಜೆಪ್ಪು ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂಧರ ಸೇವಾ ಸಂಘದಿಂದ ಉಚಿತ ನೇತ್ರ ತಪಾಸಣಾ ಶಿಬಿರವು ಇತ್ತೀಚೆಗೆ ಜೆಪ್ಪು ಮಹಾಕಾಳಿಪಡ್ಪುವಿನ ದ.ಕ.ಜಿ.ಪ.ಶಾಲೆಯಲ್ಲಿ ಜರುಗಿತು.
ಜಮೀಯ್ಯತುಲ್ ಫಲಾಹ್ ನಗರ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಕಿರಾಅತ್‌ನೊಂದಿಗೆ ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಮೀಯ್ಯತುಲ್ ಫಲಾಹ್ ಉಡುಪಿ ಮತ್ತು ದ.ಕ. ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಎಸ್‌ಡಬ್ಲ್ಯೂಎ ಅಧ್ಯಕ್ಷ ಮುಹಮ್ಮದ್ ಶರೀಫ್, ಎನ್‌ಆರ್‌ಸಿಸಿ ದಮಾಮ್ ಘಟಕದ ಮಾಜಿ ಅಮೀರ್ ಶಾಹುಲ್ ಹಮೀದ್, ಸಾಲಿಕೋಯ ,ಫಲಾಹ್‌ನ ಅಬ್ದುಲ್ ಅಝೀಝ್, ಅಂಧರ ಸೇವಾ ಸಂಘದ ಅಧ್ಯಕ್ಷ ಗುರುರಾಜ್ ಭಟ್, ಕಾರ್ಯದರ್ಶಿ ವೈ.ಆರ್. ಭಟ್, ಖಜಾಂಚಿ ಎಂ.ವಿ. ಸುಬ್ರಮಣ್ಯ, ಕಾರ್ಪೊರೇಟರ್ ಶೈಲಜಾ ಭಾಗವಹಿಸಿದ್ದರು.
ಡಾ.ಜಯರಾಮ್ ಶೆಟ್ಟಿ, ಡಾ. ಹೃಕೇಶ್ ಅಮೀನ್ ಮತ್ತು ಅವರ ತಂಡವು 194 ಶಿಬಿರಾರ್ಥಿಗಳ ತಪಾಸಣೆಯನ್ನು ಮಾಡಿ 34 ಜನರಿಗೆ ಉಚಿತ ಔಷಧಿ, 105 ಮಂದಿಗೆ ಉಚಿತ ಕನ್ನಡಕ ಹಾಗೂ 38 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಯಿತು.
ಜಮೀಯ್ಯತುಲ್ ಫಲಾಹ್ ನಗರ ಘಟಕದ ಹಿರಿಯ ಸದಸ್ಯ ಎಂ.ಐ.ಬಾನ, ಇಮ್ತಿಯಾಝ್ ಖತೀಜ್ ಹಾಮದ್ ಬಾವ, ಸಾದುದ್ದೀನ್ ಶಾಲಿ, ಪಿಬಿಎ ರಝಾಕ್, ಅಬೂಬಕರ್ ಜಿ.ಎಚ್., ಕಚೇರಿ ಮುಖ್ಯಸ್ಥ ಆದಂ ಬ್ಯಾರಿ ಮತ್ತಿತರರು ಉಪಸ್ಥಿತರಿದ್ದರು.
ಮುಹಮ್ಮದ್ ಹನೀಫ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಮಾಲುದ್ದೀನ್ ಕುದ್ರೋಳಿ ವಂದಿಸಿದರು.