ಲೈಂಗಿಕ ಕಿರುಕುಳ ತಡೆಗೆ ಸಹಾಯವಾಣಿ
ಬೆಂಗಳೂರು, ನ. 27: ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಹಿಂಸೆ, ದೌರ್ಜನ್ಯ ತಡೆಗಟ್ಟಲು ಅಂತರ್‌ರಾಷ್ಟ್ರೀಯ ಫೌಂಡೇಶನ್(ಪಿಸಿವಿಸಿ) ಉಚಿತ ಸಹಾಯವಾಣಿಯನ್ನು ಆರಂಭಿಸಿದೆ.
ದಿನದ ಇಪ್ಪತ್ತ್ನಾಲ್ಕು ಗಂಟೆಗಳ ಕಾಲ ಸಂತ್ರಸ್ತರ ಕರೆಗಳಿಗೆ ಸ್ಪಂದಿಸಲಿದ್ದು, ಸ್ವಯಂ ಸೇವಕರು ಅಗತ್ಯ ನೆರವು ಹಾಗೂ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ಸಂತ್ರಸ್ತರು ಟೋಲ್‌ಫ್ರೀ ಸಂಖ್ಯೆ-044-4311 1143/1800 102 7282ನ್ನು ಸಂಪರ್ಕಿಸಲು ಕೋರಲಾಗಿದೆ. ತಕ್ಷಣವೇ ತುರ್ತು ಮಧ್ಯಸ್ಥಿಕೆಗಳು, ಸುರಕ್ಷತೆ, ಪೊಲೀಸ್ ಸಂಪರ್ಕ, ಕಾನೂನು ಮತ್ತು ವೈದ್ಯಕೀಯ ನೆರವು ನೀಡಲಿದೆ ಎಂದು ತಿಳಿಸಲಾಗಿದೆ.
ಮಕ್ಕಳು-ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಹಾಯವಾಣಿ ಆರಂಭಿಸಿದ್ದು, ಸಂತ್ರಸ್ತರಿಗೆ ಅಗತ್ಯ ಸಹಾಯ ಒದಗಿಸುವುದು ಸಹಾಯವಾಣಿಯ ಮೂಲ ಉದ್ದೇಶ. ನಮ್ಮ ಸಂಸ್ಥೆಯ ಸಿಬ್ಬಂದಿ 24 ಗಂಟೆಗಳ ಕಾಲ ಸಂತ್ರಸ್ತರಿಗೆ ನೆರವಾಗಲಿದ್ದಾರೆಂದು ಟ್ರಸ್ಟಿ ಡಾ.ಪ್ರಸನ್ನ ಪ್ರಕಟಣೆಯಲ್ಲಿ ಹೇಳಿದ್ದಾರೆ.
Next Story





