ಮಹಿಳೆಯ ಕರಿಮಣಿ ಸರ ಅಪಹರಣ
ಬೈಂದೂರು, ನ.27: ಕಂಬದಕೋಣೆ ಕಾಲೇಜಿನ ಸಮೀಪದ ಮಣ್ಣು ರಸ್ತೆಯಲ್ಲಿ ನ.26ರಂದು ರಾತ್ರಿ 8:30ರ ಸುಮಾರಿಗೆ ನಡೆದುಕೊಂಡು ಹೋಗು ತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಅಪರಿಚಿತನೊಬ್ಬ ಅಪ ಹರಿಸಿ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ಕೆರ್ಗಾಲ್ ಗ್ರಾಮ ನಾಯ್ಕನಕಟ್ಟೆ ನಿವಾಸಿ ಶಂಕರ ಜೋಗಿ ಎಂಬವರ ಪತ್ನಿ ಪಾರ್ವತಿ ಜೋಗಿ(57) ಎಂಬವರು ಉಪ್ಪುಂದ ಶ್ರೀದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಬಳೆ ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತ್ತಿರುವಾಗ ಹಿಂಬದಿ ಯಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದ ಎನ್ನಲಾಗಿದೆ.
ಈ ರಭಸಕ್ಕೆ ಕರಿಮಣಿ ಸರ ತುಂಡಾಗಿದ್ದು ಒಂದು ಭಾಗ ಸುಮಾರು 80ಸಾವಿರ ರೂ. ವೌಲ್ಯದ ಮೂರೂವರೆ ಪವನ್ ಚಿನ್ನವನ್ನು ಆರೋಪಿ ಹಿಡಿದುಕೊಂಡು ಪರಾರಿಯಾದನು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story