ಹನೂರು: ಬೈಕ್- ಕಾರು ಮುಖಾಮುಖಿ ಢಿಕ್ಕಿ; ಇಬ್ಬರಿಗೆ ಗಾಯ

ಹನೂರು,ನ.27: ಪಟ್ಟಣದ ಸರ್ಕಾರಿ ಜಿ.ವಿ ಗೌಡ ಪಪೂ ಕಾಲೇಜಿನ ರಸ್ತೆಯಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರಿಬ್ಬರು ಗಾಯಗೊಂಡಿದ್ದಾರೆ.
ತಾಲೂಕಿನ ಭೈರನತ್ತ ಗ್ರಾಮದ ಮಂಜುನಾಥ್ (21) ಮಹದೇವಸ್ವಾಮಿ (19) ಗಾಯಗೊಂಡವರು.
ಮಂಜುನಾಥ್ ಹಾಗೂ ಮಹದೇವಸ್ವಾಮಿ ಇಬ್ಬರು ಬೈಕ್‍ನಲ್ಲಿ ಸಂಜೆ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಜಿ.ವಿ ಕಾಲೇಜಿನ ಮುಖ್ಯರಸ್ತೆಯಲ್ಲಿ ಮಣಗಳ್ಳಿ ಗ್ರಾಮದ ಕಡೆಯಿಂದ ಎದುರಿನಿಂದ ಬಂದ ಟಾಟಾ ಸುಮೋ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಚಾಲನೆ ಮಾಡುತ್ತಿದ್ದ ಮಂಜುಗೆ ಕಾಲಿಗೆ ತೀವ್ರ ಪೆಟ್ಟಾಗಿದ್ದರೆ ಹಿಂಬದಿಯಲ್ಲಿ ಕುಳಿತಿದ್ದ ಮಹೇಶ್‍ಗೆ ತಲೆಗೆ ತೀವ್ರ ಪೆಟ್ಟಾಗಿದೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ, ತೀವ್ರ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಯಿತು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹನೂರು ಪೋಲಿಸರು ಪರಿಶೀಲನೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.





