ನ. 29: ಸೀರತುನ್ನಬಿ ಸಮಾಪನಾ ಕಾರ್ಯಕ್ರಮ
ಮಂಗಳೂರು, ನ. 27: ಕಳೆದ 82 ವಾರಗಳಿಂದ ನಿರಂತರವಾಗಿ ಉಳ್ಳಾಲದ ನಿಮ್ರಾ ಮಸೀದಿಯಲ್ಲಿ ರಫೀಉದ್ದೀನ್ ಕುದ್ರೋಳಿ ಅವರಿಂದ ನಡೆದ ಪ್ರವಾದಿ ಮುಹಮ್ಮದ್ (ಸ) ರ ಸಂಪೂರ್ಣ ಜೀವನ ಚರಿತ್ರೆ ತರಗತಿಯ ಸಮಾಪನಾ ಕಾರ್ಯಕ್ರಮವನ್ನು ನ. 29ರಂದು ಇಶಾ ನಮಾಝಿನ ಬಳಿಕ ನಿಮ್ರಾ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ತರಗತಿಯು ನಿರಂತರವಾಗಿ ಪ್ರತಿ ರವಿವಾರ ಫಜ್ರ್ ನಮಾಝ್ ಬಳಿಕ ನಡೆಯುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಈ ಸೀರತುನ್ನಬಿ ಸಮಾಪನಾ ಕಾರ್ಯಕ್ರಮ ನಡೆಯಲಿದೆ ಎಂದು ಲರ್ನ್ ಇಸ್ಲಾಮ್ ಫೌಂಡೇಶನ್ ಪ್ರಕಟಣೆ ತಿಳಿಸಿದೆ. ಈ ಕಾರ್ಯಕ್ರಮದ ಜೊತೆಗೆ ಯುನಿವೆಫ್ ಕರ್ನಾಟಕದ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಲಾಂಛನವನ್ನೂ ಬಿಡುಗಡೆ ಮಾಡಲಾಗುವುದು.
Next Story