ಮೈಸೂರು: ತಲೆಮರೆಸಿಕೊಂಡಿದ್ದ ಇಬ್ಬರು ಬೈಕ್ ಕಳ್ಳರ ಬಂಧನ

ಮೈಸೂರು,ನ.27: ಮೈಸೂರು ನಗರ ನರಸಿಂಹರಾಜ ಠಾಣೆಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಕೈಸರ್ ಪಾಷ (20) ಮಹಮ್ಮದ್ ರಾಝಿಕ್(19) ಎಂದು ಗುರುತಿಸಲಾಗಿದೆ. ಇವರನ್ನು ನಿನ್ನೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ತಮ್ಮ ಸ್ನೇಹಿತರೊಂದಿಗೆ ಸೇರಿ ಮೈಸೂರಿನ ಎಸ್.ಎಸ್ ನಗರ, ತಿಲಕ್‍ನಗರ, ದೇವರಾಜ ಅರಸು ರಸ್ತೆ ಹಾಗೂ ಬೆಳ್ಳೂರು ಟೌನ್‍ನಲ್ಲಿ ಕಳ್ಳತನ ಮಾಡಿದ್ದ ಒಟ್ಟು ಸುಮಾರು 3,10,000 ರೂ. ಮೌಲ್ಯದ 04 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆಯ 1, ದೇವರಾಜ ಪೊಲೀಸ್ ಠಾಣೆಯ 1, ಮಂಡಿ ಪೊಲೀಸ್ ಠಾಣೆಯ 1 ಮತ್ತು ಬೆಳ್ಳೂರು ಪೊಲೀಸ್ ಠಾಣೆಯ 1 ವಾಹನ ಕಳವು ಪ್ರಕರಣಗಳು ಪತ್ತೆಯಾಗಿದೆ.
ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ನರಸಿಂಹರಾಜ ವಿಭಾಗದ ಎ.ಸಿ.ಪಿ. ಗೋಪಾಲ್ ಅವರ ಉಸ್ತುವಾರಿಯಲ್ಲಿ ನರಸಿಂಹರಾಜ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಬಿ.ಬಸವರಾಜು, ಪೊಲೀಸ್ ಸಬ್ ಇನ್ಸಪೆಕ್ಟರ್ ಮೋಹನ್.ಎನ್, ಸಿಬ್ಬಂದಿಗಳಾದ ರಮೇಶ, ಮಂಜುನಾಥ, ಮಹದೇವ, ಕೃಷ್ಣ, ರಮೇಶ ಭಾಗಿಯಾಗಿದ್ದರು.







