Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನ.30ರಿಂದ 4ನೇ ಸುತ್ತಿನ ಕಾಫಿ ಡೇ...

ನ.30ರಿಂದ 4ನೇ ಸುತ್ತಿನ ಕಾಫಿ ಡೇ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‍ಶಿಪ್

ವಾರ್ತಾಭಾರತಿವಾರ್ತಾಭಾರತಿ27 Nov 2018 11:32 PM IST
share
ನ.30ರಿಂದ 4ನೇ ಸುತ್ತಿನ ಕಾಫಿ ಡೇ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‍ಶಿಪ್

ಚಿಕ್ಕಮಗಳೂರು, ನ.27: ಕಾಫಿ ಡೇ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‍ಶಿಪ್‍ನ ನಾಲ್ಕನೇ ಸುತ್ತಿನ ಕಾರ್ ರ್ಯಾಲಿ ನ.30ರಿಂದ ಡಿ.3ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಚಿಕ್ಕಮಗಳೂರು ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರ್ಯಾಲಿಯ ಮೂರು ಸುತ್ತುಗಳು ಮುಗಿದಿದ್ದು, ರ್ಯಾಲಿಯ 4ನೇ ಸುತ್ತು ಇದಾಗಿದೆ. ಮೂರು ಸುತ್ತುಗಳ ನಂತರ 61 ಅಂಕಗಳನ್ನು ಪಡೆದಿರುವ ಮಹೇಂದ್ರ ಅಡ್ವೆಂಚರ್ಸ್ ತಂಡದ ಅಮಿತ್ರಜತ್ ಘೋಶ್ ಹಾಗೂ ಸಹ ಚಾಲಕ ಆಶ್ವಿನ್ ನಾಯಕ್ ಮುನ್ನಡೆಸಲಿದ್ದಾರೆ. 50 ಅಂಕಗಳನ್ನು ಪಡೆದಿರುವ ಗೌರವ್ ಗಿಲ್ ಹಾಗೂ ಮೂಸಾ ಷರೀಫ್ ಎರಡನೇ ಸ್ಥಾನದಲ್ಲಿದ್ದಾರೆ. 4ನೇ ಹಂತದ ಪಂದ್ಯ ತೀವ್ರ ಕುತೂಹಲಕಾರಿಯಾಗಿದೆ ಎಂದರು.

ರ್ಯಾಲಿಯ 4ನೇ ಸುತ್ತಿನ ಪಂದ್ಯಕ್ಕೆ ನ.29ರಂದು ಸಂಜೆ ನಗರದ ಕಾಫಿ ಡೇಯಲ್ಲಿ ಸಾಂಕೇತಿಕ ಚಾಲನೆ ನೀಡಲಾಗುವುದು. ನ.30ರಂದು ಮಧ್ಯಾಹ್ನ ಆಂಬರ್ ವ್ಯಾಲಿ ಶಾಲೆಯ ಆವರಣದಲ್ಲಿ ಪ್ರೇಕ್ಷಕರ ಸುತ್ತು ನಡೆಯಲಿದೆ. ಇಲ್ಲಿ ಚಾಲಕರು 2.1 ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ. ಡಿ.1 ಮತ್ತು 2ರಂದು ರ್ಯಾಲಿಯು ಕಾಫಿ ಡೇ ಗ್ಲೋಬಲ್ ಎಸ್ಟೇಟ್ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ನಡೆಯಲಿದೆ ಎಂದ ಅವರು, ಮೂಡಿಗೆರೆ ಹಾಗೂ ಬೇಲೂರು ತಾಲೂಕಿನ ಕಾಫಿ ತೋಟಗಳ ಅಂಕು ಡೊಂಕಿನ ಮಣ್ಣಿನ ರಸ್ತೆಯಲ್ಲಿ ರ್ಯಾಲಿ ನಡೆಯಲಿದೆ ಎಂದರು.

ಚಟ್ಟನಹಳ್ಳಿ, ಚಂದ್ರಾಪುರ ಹಾಗೂ ಕಮ್ಮರಗೋಡು ತೋಟಗಳನ್ನು ರ್ಯಾಲಿಗಾಗಿ ಗುರುತಿಸಲಾಗಿದೆ. ಡಿ.1ರಂದು ಎಲ್ಲ ಸ್ಪರ್ಧಾಳುಗಳು ಈ ಮೂರು ಎಸ್ಟೇಟ್‍ಗಳಲ್ಲಿ ಎರಡು ಬಾರಿ ಕಾರುಗಳನ್ನು ಓಡಿಸುವರು. ಡಿ.3ರಂದು ರ್ಯಾಲಿಯ ಕೊನೆಯ ದಿನವಾಗಿದ್ದು ಎಲ್ಲ ಸ್ಪರ್ಧಾಳುಗಳು ಒಂದು ಬಾರಿ ಚಾಲನೆ ಮಾಡುವರು. ಎರಡು ದಿನಗಳ ಕಾಲ ಸ್ಪರ್ಧಾಳುಗಳು ಒಟ್ಟಾರೆ 229 ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ ಎಂದ ಅವರು, ಐ.ಎನ್.ಆರ್.ಸಿ.ಯ 3 ಸುತ್ತುಗಳ ನಂತರ ಕರ್ಣ ಕಡೂರು ಹಾಗೂ ಕಾಂತರಾಜ್ ಮೂರನೇ ಸ್ಥಾನದಲ್ಲಿ ಹಾಗೂ ಗೋಶ್ ಹಾಗೂ ಗಿಲ್ ಐ.ಎನ್.ಆರ್.ಸಿ. 2 ವರ್ಗದಲ್ಲಿ ಮುಂದಿದ್ದಾರೆ. ಐ.ಎನ್.ಆರ್.ಸಿ. 3 ವಿಭಾಗದಲ್ಲಿ ಅರೂರ್ ವಿಕ್ರಂ ರಾವ್ ಹಾಗೂ ಡೀನ್ ಮಸ್ಕರೇನಸ್ ಮುಂದಿದ್ದಾರೆ ಎಂದು ತಿಳಿಸಿದರು.

ಕ್ಲಬ್‍ನ ಉಪಾಧ್ಯಕ್ಷ ಫಾರೂಕ್ ಅಹಮದ್ ಮಾತನಾಡಿ, ಕಳೆದ 2 ವರ್ಷಗಳಿಂದ ಐ.ಎನ್.ಆರ್.ಸಿ. ರ್ಯಾಲಿಯೊಂದಿಗೆ ಎಪಿಆರ್‍ಸಿ ರ್ಯಾಲಿಯೂ ಕಾಫಿ ನಾಡಿನಲ್ಲಿ ನಡೆಯುತ್ತಿತ್ತು. ಈಗಾಗಲೆ ಎ.ಪಿ.ಆರ್.ಸಿ. ವಿಜೇತರು ಎಂಬುದು ತಿಳಿದು ಬಂದಿದೆ. ಆದ ಕಾರಣ ಬಹುತೇಕ ಎಲ್ಲ ವಿದೇಶಿ ಸ್ಪರ್ಧಾಳುಗಳು ವಿಶ್ವ ರ್ಯಾಲಿ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಇಲ್ಲಿಗೆ ಕೇವಲ 3 ಜನ ಸ್ಪರ್ಧಾಳುಗಳು ಬರುತ್ತಾರೆ ಎಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ನಾವು ಎ.ಪಿ.ಆರ್.ಸಿ. ಚಾಂಪಿಯನ್‍ಶಿಪ್ ನಡೆಸಲು ಒಪ್ಪಲಿಲ್ಲ. ಈ ಬಾರಿಯ ಐ.ಎನ್.ಆರ್.ಸಿ. ರ್ಯಾಲಿ ಚಾಂಪಿಯನ್‍ಶಿಪ್‍ಗೆ ದಾಖಲೆಯ 47 ಸ್ಪರ್ಧಾಳುಗಳು ನೋಂದಣಿ ಮಾಡಿಸಿದ್ದಾರೆ. ಈ ಪ್ರಮಾಣದಲ್ಲಿ ಸ್ಪರ್ಧಾಳುಗಳು ಯಾವಾಗಲೂ ಪಾಲ್ಗೊಂಡಿರಲಿಲ್ಲ. ಇದೊಂದು ದಾಖಲೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋಟ್ರ್ಸ್ ಕ್ಲಬ್‍ನ ಮಾಚಯ್ಯ, ಅಭಿಜಿತ್ ಪೈ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X