ತಪ್ಪು ವಯಸ್ಸು ನೀಡುವ ಆಟಗಾರನಿಗೆ 2 ವರ್ಷ ನಿಷೇಧ
ಹೊಸದಿಲ್ಲಿ, ನ.27: ತಪ್ಪು ವಯಸ್ಸು ನೀಡುವ ವಿಚಾರಕ್ಕೆ ಸಂಬಂಧಿಸಿ ಆಟಗಾರ ತಪ್ಪಿತಸ್ಥನಾಗಿದ್ದರೆ ಎರಡು ವರ್ಷಗಳ ಕಾಲ ಎಲ್ಲ ಮಾನ್ಯತೆಯಿರುವ ಟೂರ್ನಿಗಳಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗುವುದು ಎಂದು ಬಿಸಿಸಿಐ ಮಂಗಳವಾರ ಘೋಷಿಸಿದೆ.
‘‘ಕ್ರೀಡೆಯಲ್ಲಿ ನಡೆಯುವ ವಯಸ್ಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ ಶೂನ್ಯ ಸಂಹಿಷ್ಣುತೆ ನೀತಿಯನ್ನು ಹೊಂದಿದೆ. ಬಿಸಿಸಿಐ ಟೂರ್ನಿಗಳಲ್ಲಿ ನೋಂದಣಿಯಾಗುವಾಗ ಜನ್ಮ ದಿನದ ಪ್ರಮಾಣಪತ್ರದಲ್ಲಿ ತಪ್ಪು ದಿನಾಂಕ ನೀಡಿ ಸಿಕ್ಕಿಬೀಳುವ ಕ್ರಿಕೆಟಿಗನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’’ ಎಂದು ಬಿಸಿಸಿಐ ತಿಳಿಸಿದೆ.
ಈ ಹಿಂದೆ ಇಂತಹ ತಪ್ಪು ಮಾಡುವ ಕ್ರಿಕೆಟಿಗನಿಗೆ ಒಂದು ವರ್ಷ ನಿಷೇಧ ವಿಧಿಸಲಾಗುತ್ತಿತ್ತು. ಸೆಪ್ಟಂಬರ್‌ನಲ್ಲಿ ಬಿಸಿಸಿಐ ಮೇಘಾಲಯ ಮೂಲದ ದಿಲ್ಲಿ ಆಟಗಾರ ಜಸ್‌ಕೀರತ್ ಸಿಂಗ್ ಸಚ್‌ದೇವ್‌ಗೆ ನಕಲಿ ಜನ್ಮಪ್ರಮಾಣಪತ್ರ ನೀಡಿ ಅಂಡರ್-19 ಟೂರ್ನಮೆಂಟ್‌ನಲ್ಲಿ ಆಡಿದ ತಪ್ಪಿಗೆ ನಿಷೇಧ ವಿಧಿಸಿತ್ತು.
Next Story





