ಉತ್ತರ ಚೀನಾ: ರಾಸಾಯನಿಕ ಕಾರ್ಖಾನೆ ಬಳಿ ಸ್ಫೋಟ; 22 ಬಲಿ

ಬೀಜಿಂಗ್, ನ.28: ಉತ್ತರ ಚೀನಾದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಮುಂಜಾನೆ ಸಂಭವಿಸಿದ ಭೀಕರ ಸ್ಫೋಟದಲ್ಲಿ 22 ಮಂದಿ ಮೃತಪಟ್ಟಿದ್ದು, ಇತರ 22 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬೀಜಿಂಗ್ ನಗರದಿಂದ ವಾಯವ್ಯಕ್ಕೆ 200 ಕಿಲೋಮೀಟರ್ ದೂರದ ಝಂಗ್ ಜಿಯಾಕೊವ್ ಪಟ್ಟಣದ ಹೆಬೀ ಶೆಂಗುವಾ ಕೆಮಿಕಲ್ ಕಂಪೆನಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, 50ಕ್ಕೂ ಹೆಚ್ಚು ಟ್ರಕ್‌ಗಳು ಭಸ್ಮವಾಗಿವೆ ಎಂದು ಸ್ಥಳೀಯ ಪ್ರಚಾರ ಇಲಾಖೆ ಪ್ರಕಟಿಸಿದೆ.
ಮಂಗಳವಾರ ಮಧ್ಯರಾತ್ರಿ ಬಳಿಕ ಅಂದರೆ ಬುಧವಾರ ಮುಂಜಾನೆ 12:41ಕ್ಕೆ ಸ್ಫೋಟ ಸಂಭವಿಸಿದೆ. ಸುಟ್ಟು ಕರಕಲಾದ ವಾಹನಗಳಿಂದಾಗಿ ಇಡೀ ಪ್ರದೇಶದಲ್ಲಿ ಇನ್ನೂ ದಟ್ಟ ಹೊಗೆ ಆವರಿಸಿದೆ. ವಾಹನಗಳ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಅಧಿಕೃತ ಪ್ರಸಾರ ಸಂಸ್ಥೆಯಾದ ಸಿಜಿಟಿಎನ್ ವರದಿ ಮಾಡಿದೆ.
ಅಗ್ನಿಶಾಮಕ ಸಿಬ್ಬಂದಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಘಟನೆಯ ಕಾರಣ ಪತ್ತೆ ಮಾಡಲು ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
Next Story





