ನ.30ರಂದು ಮಂಗಳೂರಿನಲ್ಲಿ ಕೆಸಿಎಫ್ ಕಾರ್ಯಕರ್ತರ ಸಂಗಮ
ಮಂಗಳೂರು, ನ.28: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್), ಎಸ್ಸೆಸ್ಸೆಫ್, ಎಸ್‌ವೈಎಸ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 3ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ‘ಕನಕ್ಟ್-2018’ ಸಾಮುದಾಯಿಕ ಸಮ್ಮಿಲನದ ಅಂಗವಾಗಿ ವಿದೇಶಗಳಲ್ಲಿರುವ ಕೆಸಿಎಫ್ ಕಾರ್ಯಕರ್ತರ ಸಂಗಮ ನ.30ರಂದು ಅಪರಾಹ್ನ 3ಗಂಟೆಗೆ ಮಂಗಳೂರಿನ ಜಂಇಯ್ಯತುಲ್ ಉಲಮಾ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಸಿಎಫ್ ಕಾರ್ಯಕರ್ತರು ಭಾಗವಹಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 9731208110 ಅಥವಾ 7022769790ನ್ನು ಸಂಪರ್ಕಿಸಬಹುದು ಎಂದು ಮೀಡಿಯಾ ಸೆಲ್ ಕನ್ವೀನರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story