ಕಾನೆಕೆರೆ: ಮೀಲಾದುನ್ನಬಿ, ಬುರ್ದಾ ಮಜ್ಲಿಸ್

ದೇರಳಕಟ್ಟೆ, ನ.28: ಕಾನೆಕೆರೆಯ ತರ್ಬಿಯತುಲ್ ಇಸ್ಲಾಂ ಮದ್ರಸದ ಆಶ್ರಯದಲ್ಲಿ ಮೀಲಾದ್ ಕಾರ್ಯಕ್ರಮ ನಡೆಯಿತು.
ಬಿ.ಕೆ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯ ಇಹ್ಸಾನ್ ನಾಯಕರು ವಿ.ಯು.ಇಸ್ಹಾಕ್ ಝುಹರಿ ಸೂರಿಂಜೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಅಲ್- ಮದೀನಾ ಬುರ್ದಾ ಸಂಘದಿಂದ ಲಿಬಾನ್ ಕೆ ಸಿ.ರೋಡ್ ನೇತೃತ್ವದಲ್ಲಿ ಬೃಹತ್ ಬುರ್ದಾ ಮಜ್ಲಿಸ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾನೆಕೆರೆ ಮದ್ರಸ ಮುಅಲ್ಲಿಂ ಅಶ್ರಫ್ ಸಅದಿ ಪಡಿಕ್ಕಲ್, ಎಸ್ಸೆಸ್ಸೆಫ್ ಶಾಖೆಯ ಅಧ್ಯಕ್ಷ ಮುಹಮ್ಮದ್ ರಫೀಕ್, ದೇರಳಕಟ್ಟೆ ಎಸ್.ವೈ.ಎಸ್. ಸೆಂಟರ್ ಅಧ್ಯಕ್ಷ ಹಾಜಿ ಏಷಿಯನ್ ಬಾವ, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯ ಕಬೀರ್ ಡಿ. ಹಾಗೂ ಅಬ್ದುಲ್ ರಝಾಕ್, ಕಾನೆಕೆರೆ ಎಸ್.ವೈ.ಎಸ್. ಪ್ರ. ಕಾರ್ಯದರ್ಶಿ ಅಬ್ದುರ್ರಹ್ಮಾನ್, ಗೌರವಾಧ್ಯಕ್ಷ ಅಬ್ದುಲ್ ಅಝೀಝ್, ಅಬ್ದುರ್ರಹ್ಮಾನ್, ಎಸ್.ವೈ.ಎಸ್. ಸದಸ್ಯ ಉಮರ್, ಮುಹಮ್ಮದ್ ಅಶ್ರಫ್, ಹಸೈನಾರ್ ಮುಂತಾದವರು ಉಪಸ್ಥಿತರಿದ್ದರು.
ಸದರ್ ಅಬ್ದುಲ್ಲತೀಫ್ ಮದನಿ ಕಾರ್ಯಕ್ರಮ ನಿರೂಪಿಸಿದರು.
Next Story