ಟ್ರಂಪ್ ಟ್ವೀಟ್ ನಲ್ಲಿದ್ದ ತಪ್ಪನ್ನು ಎತ್ತಿ ತೋರಿಸಿದ ಅಸ್ಸಾಂ ವಿದ್ಯಾರ್ಥಿನಿಗೆ ವಿಶ್ವಾದ್ಯಂತ ಪ್ರಶಂಸೆಯ ಸುರಿಮಳೆ
ಹೊಸದಿಲ್ಲಿ, ನ.28: ಜಾಗತಿಕ ತಾಪಮಾನದ ಬಗ್ಗೆ ವ್ಯಂಗ್ಯವಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಸ್ಸಾಂ ರಾಜ್ಯದ ಜೊರ್ಹಟ್ ಪಟ್ಟಣದ ವಿದ್ಯಾರ್ಥಿನಿ, 18 ವರ್ಷದ ಆಸ್ಥಾ ಸರ್ಮಾಹ್ ಟೀಕಿಸಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾಳೆ. ನವೆಂಬರ್ 21ರಂದು ಟ್ವೀಟ್ ಮಾಡಿದ್ದ ಟ್ರಂಪ್, ವಾಷಿಂಗ್ಟನ್ ಡಿಸಿಯಲ್ಲಿ ತಾಪಮಾನ ಮೈನಸ್ ಎರಡು ಡಿಗ್ರಿ ಸೆಲ್ಸಿಯಸ್‍ನಷ್ಟು ಇಳಿದಿರುವ ಬಗ್ಗೆ ಪ್ರತಿಕ್ರಿಯಿಸಿ “ಈ ಬರ್ಬರ ಚಳಿ ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಬಹುದು. ಗ್ಲೋಬಲ್ ವಾರ್ಮಿಂಗ್‍ಗೆ ಏನಾಯಿತು?'' ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಆಸ್ಥಾ, “ನಾನು ನಿಮಗಿಂತ 54 ವರ್ಷ ಕಿರಿಯಳು. ಈಗಷ್ಟೇ ಸಾಮಾನ್ಯ ಅಂಕ ಗಳಿಸಿ ಹೈಸ್ಕೂಲ್ ಮುಗಿಸಿದ್ದೇನೆ. ಆದರೆ ನಾನು ಕೂಡ ಹವಾಮಾನ ಹಾಗೂ ತಾಪಮಾನ ಒಂದೇ ಅಲ್ಲ ಎಂದು ನಿಮಗೆ ವಿವರಿಸಬಲ್ಲೆ. ನಿಮಗೆ ಅರ್ಥವಾಗಬೇಕೆಂದಿದ್ದರೆ ನಾನು 2ನೇ ಗ್ರೇಡಿನಲ್ಲಿ ಕಲಿಯುವಂದಿನಿಂದ ಹೊಂದಿರುವ ಎನ್‍ಸೈಕ್ಲೋಪೀಡಿಯಾ ನಿಮಗೆ ಎರವಲು ನೀಡಬಲ್ಲ. ಅದರಲ್ಲಿ ಚಿತ್ರಗಳು ಮತ್ತು ಎಲ್ಲ ಇವೆ” ಎಂದು ಬರೆದಿದ್ದಾಳೆ.
ಆಕೆ ಟ್ರಂಪ್‍ಗೆ ನೀಡಿದ ಈ ಉತ್ತರ ಈಗಾಗಲೇ 24,000 ಲೈಕ್ ಮಾಡಿದ್ದಾರೆ. ಈ ಪೋಸ್ಟ್ 6,000ಕ್ಕೂ ಅಧಿಕ ರಿಟ್ವೀಟ್ ಪಡೆದಿದೆಯಲ್ಲದೆ ಎಲ್ಲರೂ ಆಕೆಯನ್ನು ಹೊಗಳಿದ್ದಾರೆ. ಆದರೆ ಆಕೆ ಹೇಳಿದ್ದು ಟ್ರಂಪ್‍ಗೆ ಅರ್ಥವಾಗುವುದೇ ಎಂದು ಪ್ರಶ್ನಿಸಿದವರೂ ಇದ್ದಾರೆ.
I am 54 years younger than you. I just finished high school with average marks. But even I can tell you that WEATHER IS NOT CLIMATE. If you want help understanding that, I can lend you my encyclopedia from when I was in 2nd grade. It has pictures and everything.
— Astha Sarmah (@thebuttcracker7) November 22, 2018