ಹೆಬ್ರಿ: ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ
ಉಡುಪಿ, ನ.28: ಉಡುಪಿ ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕಾರ್ಕಳ ತಾಲೂಕಿನ ಹೆಬ್ರಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೇಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನೆಸಿ ದಂಡ ವಸೂಲಿ ಮಾಡಲಾಯಿತು.
ದಾಳಿಯಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಆನಂದ ಗೌಡ, ಕಾರ್ಕಳದ ಹಿರಿಯ ಆರೋಗ್ಯ ಸಹಾಯಕ ಶಿವರಾಮ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ, ಎನ್‌ಟಿಸಿಪಿ ಸಮಾಜ ಕಾರ್ಯಕರ್ತೆ ಶೈಲಾ ಶಾಮನೂರು, ಹೆಬ್ರಿ ಪೊಲೀಸ್ ಠಾಣೆಯ ಎಎಸ್‌ಐ ಗಣೇಶ್, ಸಂಶೋಧನಾ ಸಹಾಯಕ ಡಾ. ದೀಪಕ್ ಉಪಸ್ಥಿತರಿದ್ದರು.
Next Story