ಕೆನೆತ್ ಲಾರೆನ್ಸ್ ಪೊವೆಲ್: 'ದಿ ಜೆಂಟ್ಲ್ ಮ್ಯಾನ್ ಸ್ಪ್ರಿಂಟರ್' ಆದ ವೇಗದ ಬೌಲರ್
2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು,ನ.28: 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರಕಟಿಸಿದ್ದು, ಕೆನೆತ್ ಲಾರೆನ್ಸ್ ಪೊವೆಲ್ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೋಲಾರದಲ್ಲಿ ಹುಟ್ಟಿದ (ಎಪ್ರಿಲ್ 20, 1940) ಕೆನೆತ್ ಪೊವೆಲ್ ದೇಶದ ಖ್ಯಾತ ಅಥ್ಲೀಟ್ ಗಳಲ್ಲಿ ಒಬ್ಬರು. 1964 ರಲ್ಲಿ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. 1965 ರಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು, 'ದಿ ಜೇಂಟ್ಲ್ ಮ್ಯಾನ್ ಸ್ಪ್ರಿಂಟರ್ ' ಎಂದೇ ಖ್ಯಾತಿ ಪಡೆದವರು.
ಕೆಜಿಎಫ್ ನ ಕೊಲೊನಿಯಲ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಮಾರಕ ವೇಗದ ಬೌಲರ್ ಆಗಿದ್ದ ಕೆನೆತ್ ಗೆ ಅವರ ಕೋಚ್ ಬೆಂಜಮಿನ್ ಅಥ್ಲೆಟಿಕ್ಸ್ ನತ್ತ ಗಮನ ಹರಿಸುವಂತೆ ಸಲಹೆ ನೀಡಿದ ಮೇಲೆ ಅವರ ಜೀವನದ ದಿಕ್ಕೇ ಬದಲಾಯಿತು. ಆ ಬಳಿಕ ಹಿಂದಿರುಗಿ ನೋಡದ ಕೆನೆತ್ 17 ಬರಿ ರಾಷ್ಟ್ರೀಯ ಸ್ಪ್ರಿಂಟ್ ಚಾಂಪಿಯನ್ ಆದರು.
1964 ರ ಟೋಕಿಯೋ ಒಲಂಪಿಕ್ಸ್ ನಲ್ಲಿ 100 ಮೀ. ಹಾಗು 200 ಮೀ. ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿ ತಮ್ಮ ಅದ್ಭುತ ಪ್ರದರ್ಶನದಿಂದ ಗಮನ ಸೆಳೆದಿದ್ದರೂ ಪದಕ ಪಡೆಯುವಲ್ಲಿ ವಿಫಲವಾದರು. ದೇಶದ ಶ್ರೇಷ್ಠ ಅಥ್ಲೀಟ್ ಮಿಲ್ಕಾ ಸಿಂಗ್ ರ ಸಮಕಾಲೀನರು ಮತ್ತು ಆತ್ಮೀಯರು.







