ಪಾಕ್‌ನಲ್ಲಿ ಚುನಾವಣೆಗೆ ನಿಲ್ಲಿ, ಗೆಲ್ಲುತ್ತೀರಿ: ಸಿಧುಗೆ ಇಮ್ರಾನ್

ಲಾಹೋರ್, ನ. 28: ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ನವಜೋತ್ ಸಿಂಗ್ ಸಿಧು ಖಂಡಿತವಾಗಿಯೂ ಗೆಲ್ಲುತ್ತಾರೆ ಎಂದು ಇಮ್ರಾನ್ ಖಾನ್ ಹೇಳಿದರು.
‘‘ಸಿಧು ಸಾಬ್, ನೀವು ಪಾಕಿಸ್ತಾನದ ಪಂಜಾಬ್‌ಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ನೀವು ಗೆಲ್ಲುತ್ತೀರಿ’’ ಎಂದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ನಡುವಿನ ಸ್ನೇಹ ಕರ್ತಾರ್‌ಪುರ ಕಾರಿಡಾರ್ ಶಿಲಾನ್ಯಾಸ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆಯಿತು. ಇಬ್ಬರೂ ಪರಸ್ಪರರನ್ನು ಹಾಡಿ ಹೊಗಳಿದರು.
ಇಮ್ರಾನ್ ನನ್ನ ಆಪ್ತಮಿತ್ರ ಎಂಬುದಾಗಿ ಬಣ್ಣಿಸಿದ ಸಿಧು, ಕಾರಿಡಾರ್‌ಗೆ ಹಸಿರು ನಿಶಾನೆ ತೋರಿಸಿರುವುದಕ್ಕಾಗಿ ಖಾನ್‌ರನ್ನು ಅಭಿನಂದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಮ್ರಾನ್, ‘‘ಎರಡು ದೇಶಗಳ ನಡುವೆ ಸ್ನೇಹ ಏರ್ಪಡಲು ಸಿಧು ಭಾರತದ ಪ್ರಧಾನಿಯಾಗುವವರೆಗೆ ನಾವು ಕಾಯಬೇಕಾಗಿಲ್ಲ ಎಂದು ಆಶಿಸುತ್ತೇನೆ’’ ಎಂದು ಹೇಳಿದರು.
Next Story