ಕಚೇರಿ ಕಟ್ಟಡದ ಮೇಲಿನಿಂದ ಹಾರಿ ಎಸಿಪಿ ಆತ್ಮಹತ್ಯೆ
ಹೊಸದಿಲ್ಲಿ, ನ.29: ದಿಲ್ಲಿಯ ಸಹಾಯಕ ಪೊಲೀಸ್ ಆಯುಕ್ತರೊಬ್ಬರು ಪೊಲೀಸ್ ಇಲಾಖೆಯ ಪ್ರಧಾನ ಕಚೇರಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
55 ರ ಹರೆಯದ ಎಸಿಪಿ ಪ್ರೇಮ್ ಬಲ್ಲಬ್ ಎಂಬವರು ‘ಇಂದ್ರಪ್ರಸ್ಥಾ ಮಾರ್ಗ್’ ನಲ್ಲಿರುವ ಪೊಲೀಸ್ ಇಲಾಖೆಯ ಪ್ರಧಾನ ಕಚೇರಿ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಮ್ ಬಲ್ಲಬ್ ದಿಲ್ಲಿಯ ಕ್ರೈಮ್ ಮತ್ತು ಟ್ರಾಫಿಕ್ ವಿಭಾಗದಲ್ಲಿ ಎಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Next Story