Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸುಖನಿದ್ರೆ ನೀಡುವ ಈ ಅಚ್ಚರಿದಾಯಕ...

ಸುಖನಿದ್ರೆ ನೀಡುವ ಈ ಅಚ್ಚರಿದಾಯಕ ಆರೋಗ್ಯಲಾಭಗಳು ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ29 Nov 2018 5:36 PM IST
share
ಸುಖನಿದ್ರೆ ನೀಡುವ ಈ ಅಚ್ಚರಿದಾಯಕ ಆರೋಗ್ಯಲಾಭಗಳು ಗೊತ್ತೇ?

ರಾತ್ರಿ ಸುಖವಾದ ನಿದ್ರೆಯು ಮರುದಿನವಿಡೀ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ ಮಾತ್ರವಲ್ಲ, ಇದಕ್ಕೂ ಮಿಗಿಲಾಗಿ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ನಿದ್ರೆಯು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ರಾತ್ರಿ ಸರಿಯಾಗಿ ನಿದ್ರೆ ಬಾರದಿರಲು ಕಾರಣಗಳೇನು?

1) ನಿಗದಿತ ನಿದ್ರೆಯ ಸಮಯವಿಲ್ಲದಿರುವುದು ಇಂತಹ ಕಾರಣಗಳಲ್ಲೊಂದಾಗಿದೆ. ನಿಮ್ಮ ನಿದ್ರೆಗೆ ಒಂದು ವೇಳಾಪಟ್ಟಿಯನ್ನು ನಿಗದಿಗೊಳಿಸಿಕೊಳ್ಳಿ ಮತ್ತು ಪ್ರತಿದಿನ ಒಂದೇ ಸಮಯದಲ್ಲಿ ನಿದ್ರೆ ಮಾಡಿ.

2) ರಾತ್ರಿ ನಿದ್ರೆಗೆ ಮುನ್ನ ಗಂಟೆಗಳ ಕಾಲ ಸ್ನೇಹಿತರೊಂದಿಗೆ ಚಾಟಿಂಗ್ ಅಥವಾ ಇಂಟರ್ನೆಟ್ ಬ್ರೌಸಿಂಗ್ ನಿಮ್ಮ ಪಾಲಿಗೆ ನಿದ್ರಾರಹಿತ ರಾತ್ರಿಗಳನ್ನುಂಟು ಮಾಡಬಹುದು. ಹೀಗಾಗಿ ನಿದ್ರೆಗೆ ಮುನ್ನ ಬೆಳಕು ಸೂಸುವ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಂತಹ ಸಾಧನಗಳ ಬಳಕೆಯಿಂದ ದೂರವಿರಿ.

3) ರಾತ್ರಿ ತಡವಾಗಿ ಊಟ ಮಾಡಿದ ಬೆನ್ನಿಗೇ ನಿದ್ರೆಗೆ ಶರಣಾಗುವುದು ಒಳ್ಳೆಯದಲ್ಲ. ಸಾಮಾನ್ಯವಾಗಿ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಎರಡು ಗಂಟೆಗಳ ಅಂತರವಿರಬೇಕು. ಈ ಅವಧಿಯಲ್ಲಿ ಸೇವಿಸಿದ ಆಹಾರ ಸೂಕ್ತವಾಗಿ ಜೀರ್ಣಗೊಳ್ಳುತ್ತದೆ ಮತ್ತು ನಿದ್ರೆಯ ಸಮಯದಲ್ಲಿ ಜೀರ್ಣ ಸಮಸ್ಯೆಗಳು ತಲೆದೋರುವುದಿಲ್ಲ.

4)ಮನೆಯಲ್ಲಿಯ ವಾಯುಮಾಲಿನ್ಯವೂ ಕಳಪೆ ನಿದ್ರೆಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಅಲ್ಲದೆ ಈ ವಾಯುಮಾಲಿನ್ಯವು ಉಸಿರಾಟದ ತೊಂದರೆ, ಅಲರ್ಜಿ, ಹೃದ್ರೋಗ ಮಾತ್ರವಲ್ಲ, ಕ್ಯಾನ್ಸರ್‌ನಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ ಏರ್ ಪ್ಯುರಿಫೈಯರ್ ಬಳಕೆಯು ನೀವು ಶುದ್ಧ ಗಾಳಿಯನ್ನು ಉಸಿರಾಡಿಸುವಂತೆ ಮಾಡಿ ಒಳ್ಳೆಯ ನಿದ್ರೆಗೆ ಉತ್ತೇಜನ ನೀಡುವ ಮೂಲಕ ನೀವು ಆರೋಗ್ಯಯುತರಾಗಿರಲು ನೆರವಾಗಬಹುದು.

ನಿದ್ರೆಯ ಆರೋಗ್ಯಲಾಭಗಳು

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನಿದ್ರೆಯು ಶರೀರದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ಸಾಬೀತುಗೊಳಿಸಿವೆ. ಸಾಕಷ್ಟು ನಿದ್ರೆಯಿಲ್ಲದಿರುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ದೀರ್ಘಕಾಲೀನ ನಿದ್ರೆಯ ಕೊರತೆಯು ಉರಿಯೂತ ಪ್ರಚೋದಕಗಳ ಜೊತೆಗೆ ಗುರುತಿಕೊಂಡಿದೆ,ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹೀಗಾಗಿ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಪ್ರತಿರೋಧವನ್ನು ಸೃಷ್ಟಿಸಲು ಪ್ರತಿದಿನ ಆರರಿಂದ ಏಳು ಗಂಟೆಗಳ ಸುಖನಿದ್ರೆಯು ಅಗತ್ಯವಾಗಿದೆ.

ಅಕಾಲ ವೃದ್ಧಾಪ್ಯವನ್ನು ತಡೆಯುತ್ತದೆ:ಚರ್ಮ ಸೇರಿದಂತೆ ಹಲವಾರು ಜೈವಿಕ ವ್ಯವಸ್ಥೆಗಳ ಬೆಳವಣಿಗೆಗೆ ಮತ್ತು ನವೀಕರಣಕ್ಕೆ ನಿದ್ರೆಯು ಅಗತ್ಯವಾಗಿದೆ. ದೀರ್ಘಕಾಲೀನ ನಿದ್ರಾ ಕೊರತೆಯು ನಮ್ಮ ಶರೀರದ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಮತ್ತು ವಯಸ್ಸಾಗುವಿಕೆಯ ಲಕ್ಷಣಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ. ದಿನಕ್ಕೆ ಐದು ಗಂಟೆಗೂ ಕಡಿಮೆ ಸಮಯ ನಿದ್ರಿಸುವವರಲ್ಲಿ ಒಣಚರ್ಮ,ಚರ್ಮ ಕೆಂಪಾಗುವಿಕೆ,ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುವ ಜೊತೆಗೆ ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ.

ನಿದ್ರೆಯ ಕೊರತೆಯು ಅಲ್ಟ್ರಾ ವಯಲೆಟ್ ಕಿರಣಗಳಿಂದ ರಕ್ಷಣೆಯನ್ನೂ ಕುಂಠಿತಗೊಳಿಸುವುದರಿಂದ ಚರ್ಮಕ್ಕೆ ಬಹುಬೇಗನೇ ವಯಸ್ಸಾಗುತ್ತದೆ ಮತ್ತು ಇದು ವ್ಯಕ್ತಿಯ ಒಟ್ಟಾರೆ ನೋಟವನ್ನು ಕೆಡಿಸುತ್ತದೆ.

ತೂಕ ಇಳಿಕೆಗೆ ನೆರವಾಗುತ್ತದೆ:ನೀವು ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸಿದ್ದರೆ ರಾತ್ರಿ ಒಳ್ಳೆೆಯ ನಿದ್ರೆ ದೊರೆಯುವಂತೆ ನೋಡಿಕೊಳ್ಳಿ. ನಿದ್ರೆಯು ಚಯಾಪಚಯವನ್ನು ಉತ್ತಮಗೊಳಿಸುವ ಮೂಲಕ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಒಳ್ಳೆಯ ನಿದ್ರೆಯು ದೈಹಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲೂ ನೆರವಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಿದ್ರೆಯ ಕೊರತೆಯಾದರೆ ಅದು ನೀವು ಬಳಲುವಂತೆ ಮಾಡುತ್ತದೆ ಮತ್ತು ದೈಹಿಕ ಚಟುವಟಿಕೆಗಳನ್ನು ನಡೆಸಲು ಹೆಚ್ಚಿನ ಶಕ್ತಿಯೂ ಇರುವುದಿಲ್ಲ. ಇದು ವ್ಯಾಯಾಮದೆಡೆಗೂ ನಿರುತ್ಸಾಹವನ್ನು ಮೂಡಿಸುತ್ತದೆ. ಒಳ್ಳೆಯ ವಿದ್ರೆಯು ಹಸಿವಿನ ಹಾರ್ಮೋನ್ ಎಂದೇ ಕರೆಯಲಾಗುವ ‘್ರೆಲಿನ್’ ಹಾರ್ಮೋನ್‌ನ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿದ್ರೆಯಲ್ಲಿ ವ್ಯತ್ಯಯವಾದಾಗ ಶರೀರವು ಹೆಚ್ಚಿನ ಪ್ರಮಾಣದಲ್ಲಿ ಈ ಹಾರ್ಮೋನ್‌ನ್ನು ಉತ್ಪಾದಿಸುತ್ತದೆ. ಇದರಿಂದ ಹಸಿವು ಹೆಚ್ಚಾಗಿ ಅತಿಯಾದ ಕೊಬ್ಬು ಮತ್ತು ಹೆಚ್ಚು ಕ್ಯಾಲರಿಗಳನ್ನೊಳಗೊಂಡ ಆಹಾರವನ್ನು ಸೇವಿಸವಂತಾಗುತ್ತದೆ. ಇದರ ಪರಿಣಾಮವಾಗಿ ಶರೀರದ ತೂಕ ಇಳಿಯುವ ಬದಲು ಇನ್ನಷ್ಟು ಹೆಚ್ಚಾಗುತ್ತದೆ.

ಹಾನಿಯ ಅಪಾಯವನ್ನು ತಗ್ಗಿಸುತ್ತದೆ:ನಿಮಗೆ ಅಚ್ಚರಿಯಾಗಬಹುದು,ಅದರೆ ಒಳ್ಳೆಯ ನಿದ್ರೆಯು ಶರೀರಕ್ಕೆ ಹಾನಿಯ ಅಪಾಯವನ್ನು ತಡೆಯುತ್ತದೆ ಮತ್ತು ನಮ್ಮನ್ನು ಸುರಕ್ಷಿತವಾಗಿಡುತ್ತದೆ. ಸಣ್ಣಮಕ್ಕಳಲ್ಲಿ ನಿದ್ರೆಯ ಕೊರತೆಯು ಗಾಯಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ನಿದ್ರೆಯ ಕೊರತೆಗೂ ಅಪಘಾತಗಳಿಗೂ ಸಂಬಂಧವಿದೆ. ನಿದ್ರೆಯಲ್ಲದೆ ಬಳಲಿದಾಗ ಮತ್ತು ಅಂತಹ ಸಂದರ್ಭದಲ್ಲಿ ವಾಹನ ಚಾಲನೆಯು ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಯು ಹೆಚ್ಚಿರುತ್ತದೆ.

ಲೈಂಗಿಕ ಆರೋಗ್ಯವನ್ನು ಹೆಚ್ಚಿಸುತ್ತದೆ:ನಿದ್ರೆಯ ಕೊರತೆಯು ಪುರುಷರಲ್ಲಿ ಟೆಸ್ಟೊಸ್ಟೆರೋನ್ ಹಾರ್ಮೋನ್ ಮಟ್ಟವನ್ನು ತಗ್ಗಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದಾಂಪತ್ಯ ಸುಖದಲ್ಲಿ ಈ ಹಾರ್ಮೋನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಸುಖನಿದ್ರೆಯು ವ್ಯಕ್ತಿಯನ್ನು ಎಲ್ಲ ರೀತಿಗಳಿಂದಲೂ ಸುಖವಾಗಿರಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X