ರಿಲಯನ್ಸ್‌ನ ರಬ್ಬರ್ ಸ್ಥಾವರದಲ್ಲಿ ಬೆಂಕಿ: ಮೂವರ ಸಾವು

ವಡೋದರಾ(ಗುಜರಾತ್),ನ.29: ಇಲ್ಲಿಯ ರಿಲಯನ್ಸ್ ಇಂಡಸ್ಟ್ರೀಸ್‌ನ ಪಾಲಿಬುಟಾಡೀನ್ ರಬ್ಬರ್ ಸ್ಥಾವರದಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮೃತಪಟ್ಟಿದ್ದಾರೆ.
ನಸುಕಿನ ಮೂರು ಗಂಟೆಯ ಸುಮಾರಿಗೆ ಸ್ಥಾವರದ ಇತರ ಉದ್ಯೋಗಿಗಳು ತಿಂಡಿ ತಿನ್ನಲು ಹೊರಗೆ ತೆರಳಿದ್ದು,ಈ ಮೂವರು ಮಾತ್ರ ಅಲ್ಲಿ ಉಳಿದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಮೃತರನ್ನು ಅರುಣ ದಾಭಿ(49),ಪ್ರೀತೇಶ ಪಟೇಲ್ ಮತ್ತು ಮಹೇಂದ್ರ ಜಾದವ್(42) ಎಂದು ಗುರುತಿಸಲಾಗಿದೆ.
Next Story





