ಎಲ್‌ಜಿ ಇಲೆಕ್ಟ್ರಾನಿಕ್ ನೀರು ಶುದ್ಧೀಕರಣ ಸಲಕರಣೆಗೆ ಹಾರ್ಟ್ ಕೇರ್ ಫೌಂಡೇಶನ್ ಪ್ರಮಾಣ ಪತ್ರ

ಮಂಗಳೂರು, ನ. 29: ಎಲ್‌ಜಿ ಇಲೆಕ್ಟ್ರಾನಿಕ್ ಇಂಡಿಯಾ ವತಿಯಿಂದ ನೀರು ಶುದ್ಧೀಕರಣ ಸಲಕರಣೆ ‘ಎಲ್‌ಜಿ ವಾಟರ್ ಪ್ಯೂರಿಫಯರ್ ’ಆರೋಗ್ಯ ಸ್ನೇಹಿ ಉಕರಣವಾಗಿದೆ ಎಂದು ಹಾರ್ಟ್ ಕೇರ್ ಫೌಂಡೇಶನ್ ಆಫ್ ಇಂಡಿಯಾ ಪ್ರಮಾಣ ಪತ್ರ ನೀಡಿದೆ ಎಂದು ಎಲ್‌ಜಿ ಇಲೆಕ್ಟ್ರಾನಿಕ್ ಇಂಡಿಯಾ ಪ್ರೈ ಲಿಮಿಟೆಡ್ ಮಂಗಳೂರು ಶಾಖೆಯ ವ್ಯವಸ್ಥಾಪಕ ಸೈಯ್ಯದ್ ಜಾಫರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಎಲ್‌ಜಿ ವಾಟರ್ ಫ್ಯೂರಿಫಯರ್‌ಮೂರು ವಿಧದ ಸವಲಭ್ಯವನ್ನು ಹೊಂದಿದೆ. ನೀರಿನ ಶುದ್ಧೀಕರಣ, ಶುದ್ಧೀಕರಿಸಿದ ನೀರಿನ ಸಮರ್ಪಕ ಸಂಗ್ರಹ ಮತ್ತು ಸಂಗ್ರಹಿತ ನೀರಿನ ಶುದ್ಧೀಕರಣವನ್ನು ಕಾಯ್ದುಕೊಳ್ಳುವುದು ಈ ಮೂರು ಸೌಲಭ್ಯಗಳು ನೂತನ ಎಲ್‌ಜಿ ಉತ್ಪನ್ನದಲ್ಲಿ ಗ್ರಾಹಕರಿಗೆ ದೊರೆಯಲಿದೆ. ನೀರು ಸಂಗ್ರಹವಾದ ಬಳಿಕ ಪ್ರತಿ 6 ಗಂಟೆಗೆ ಒಮ್ಮೆ 75 ನಿಮಿಷಗಳ ಕಾಲ ನೀರಿನ ಶುದ್ದೀಕರಣಗೊಳಿಸುವ ಪ್ರಕ್ರೀಯೆ ಈ ಉತ್ಪನ್ನದ ವಿಶೇಷತೆಯಾಗಿದೆ. ಫಿಲ್ಟರ್ ಕಾರ್ಯಕ್ಷಮತೆಯನ್ನು ತೋರಿಸುವ ಇಂಡಿಕೇಟರ್ ಇದರಲ್ಲಿ ಅಳವಡಿಸಲಾಗಿದೆ. ನೀರು ಸಂಗ್ರಹಕ್ಕೆ ಸ್ಟೀಲ್‌ನ ಟ್ಯಾಂಕ್ ಎಲ್‌ಜಿಯ ವಿಶೇಷತೆಯಾಗಿದೆ.
ದೀರ್ಘ ಬಾಳಿಕ ಮತ್ತು ಉತ್ತಮ ಗುಣ ಮಟ್ಟದ ಈ ಟ್ಯಾಂಕ್‌ನಿಂದ 94.4 ಶೇ ಬ್ಯಾಕ್ಟೀರಿಯಾ ಉತ್ಪತ್ತಿಯ್ನನು ಇದು ತಡೆಯುವ ಸಾಮಥ್ಯವನ್ನು ಹೊಂದಿದೆ. ಇದು ಪ್ಲಾಸ್ಟಿಕ್ ಟ್ಯಾಂಕ್‌ನಿಂದ ಹೆಚ್ಚು ಸುರಕ್ಷಿತ ಮತ್ತು ಪ್ಲಾಸ್ಟಿಕ್ ವಾಸನೆಯಿಂದ ಮುಕ್ತಗೊಂಡಿದೆ. ನೀರಿನ ಶುದ್ಧಗೊಳ್ಳುವ ಪ್ರಕ್ರೀಯೆ ಅಳವಡಿಸಲಾದ 5 ಫಿಲ್ಟರ್‌ಗಳ ಮೂಲಕ ನಡೆಯುತ್ತದೆ ಎಂದು ಎಲ್‌ಜಿ ಶುದ್ಧೀಕರಣ ಯಂತ್ರದಲ್ಲಿ ಅಳವಡಿಸಲಾದ ಆರ್‌ಒ ಮೂಲಕ ಬ್ಯಾಕ್ಟೀರಿಯಾ, ವೈರಸ್ ಇತರ ಹಾನಿಕಾರಕ ಅಂಶಗಳನ್ನು ಪ್ರತ್ಯೇಕಿಸುವ ಸಾಮಥ್ಯವನ್ನು ಹೊಂದಿದೆ. ಅತ್ಯಂತ ಸೂಕ್ಷ್ಮ ಜೀವಾಣುಗಳನ್ನು ನಾಶಪಡಿಸಿ ಶುದ್ಧೀಕರಣಗೊಳಿಸುವ ಪ್ರಕ್ರೀಯೆ ನಡೆಯುತ್ತದೆ. ಜೊತೆಗೆ ನೀರಿನಲ್ಲಿರಬೇಕಾದ ಖನಿಜವನ್ನು ಒಳಗೊಳ್ಳುವಂತೆ ಮಾಡುವ ಪ್ರಕ್ರೀಯೆ ನಡೆಯುತ್ತದೆ. ಎಲ್‌ಜಿ ಡಿಜಿಟಲ್ ಕಿಟ್ ಮೂಲಕ ನೀರಿನ ಕೊಳವೆ ಸೇರಿದಂತೆ ಯಾಂತ್ರೀಕೃತವಾಗಿ ಡಿಜಿಟಲ್ ವಿಧಾನದಿಂದ ಶುದ್ಧೀಕರಣ ಕ್ರೀಯೆ ನಡೆಯುತ್ತದೆ. ಎಲ್‌ಜಿ ನೀರಿನ ಶುದ್ಧೀಕರಣ ಯಂತ್ರ ಈ ರೀತಿಯ ವಿಶೇಷತೆಯೊಂದಿಗೆ 7 ವಿಧದಲ್ಲಿ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ. ಒಂದು ವರ್ಷ ಎಲ್‌ಜಿ ಉಚಿತ ನಿರ್ವಹಣೆಯನ್ನು ನೀಡಲಿದೆ. ಮಾರುಕಟ್ಟೆಯಲ್ಲಿ 16,000 ರೂ. ಮೊತ್ತದಲ್ಲಿ ಉತ್ತಮವಾದ ಕುಡಿಯುವ ನೀರು ಎಲ್‌ಜಿ ನೀರು ಶುದ್ಧೀಕರಣ ಯಂತ್ರದಿಂದ ದೊರೆಯಲಿದೆ ಎಂದು ಸೈಯ್ಯದ್ ಜಾಫರ್ ತಿಳಿಸಿದ್ದಾರೆ.