Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮನೆಗಳಲ್ಲೇ ಹಸಿ ತ್ಯಾಜ್ಯ ನಿರ್ವಹಣೆ:...

ಮನೆಗಳಲ್ಲೇ ಹಸಿ ತ್ಯಾಜ್ಯ ನಿರ್ವಹಣೆ: ರಾಮಕೃಷ್ಣ ಮಠದಿಂದ ಮಡಕೆ ಗೊಬ್ಬರ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ

ವಾರ್ತಾಭಾರತಿವಾರ್ತಾಭಾರತಿ29 Nov 2018 10:53 PM IST
share

ಮಂಗಳೂರು, ನ.29: ತ್ಯಾಜ್ಯ ಅದರಲ್ಲೂ ಮನೆಯ ಅಡುಗೆ ತ್ಯಾಜ್ಯ ನಿರ್ವಹಣೆಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವ ಮೂಲಕ ಗೊಬ್ಬರ ತಯಾರಿಸುವ ವಿಧಾನವನ್ನು ಜನಸಾಮಾನ್ಯರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲು ರಾಮಕೃಷ್ಣ ಮಿಶನ್ ಮುಂದಾಗಿದೆ.

ಈಗಾಗಲೇ ರಾಮಕೃಷ್ಣ ಮಠದಿಂದ 400 ಮನೆಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯವನ್ನು ಮಾಡಲಾಗಿದ್ದು, ಅದರಿಂದ ಯಶಸ್ಸು ದೊರಕಿರುವ ಹಿನ್ನೆಲೆಯಲ್ಲಿ ಅದನ್ನು ನಗರದಲ್ಲಿ ಇನ್ನಷ್ಟು ವ್ಯಾಪಕವಾಗಿ ಪ್ರಚಾರ ಪಡಿಸಲು ಮುಂದಾಗಿದೆ. ಈ ವರ್ಷ ಮಠದ ಸ್ವಚ್ಛತಾ ಅಭಿಯಾನದ 5ನೆ ಹಂತದ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನದಡಿ ಸುಮಾರು ಐದು ಸಾವಿರ ಮಡಕೆಗಳನ್ನು ವಿತರಿಸುವ ಮೂಲಕ ಮನೆಯಲ್ಲಿಯೇ ಹಸಿ ತ್ಯಾಜ್ಯ ನಿರ್ವಹಣೆಗೆ ಸಾರ್ವಜನಿಕರಿಗೆ ಮಾಹಿತಿ, ಜಾಗೃತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಮಠದ ವತಿಯಿಂದ ನೀಡಲು ತೀರ್ಮಾನಿಸಲಾಗಿದೆ ಎಂದು ಈ ಕಾರ್ಯಕ್ರಮದ ಪ್ರಮುಖ ರುವಾರಿಯಾಗಿರುವ ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಏನಿದು ಮಡಕೆ ಗೊಬ್ಬರ ?

ರಾಮಕೃಷ್ಣ ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗಷ್ಟೆ ಇಂಜನಿಯರ್ ಪದವಿ ಮುಗಿಸಿ ಪ್ರಸ್ತುತ ಮಠದಲ್ಲಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿರುವ ಸಚಿನ್ ಈ ಮಡಕೆ ಗೊಬ್ಬರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಈ ಮಡಕೆ ಗೊಬ್ಬರಕ್ಕಾಗಿ ಮೂರು ಮಡಕೆಗಳು ಬಳಕೆಯಾಗುತ್ತವೆ. ತಳದಲ್ಲಿಡುವ ಮಡಕೆಯ ತಳಭಾಗ ಮುಚ್ಚಲ್ಪಟ್ಟಿರುತ್ತದೆ. ಉಳಿದೆರಡು ಮಡಕೆಗಳ ತಳಭಾಗ ತೆರೆದಿರುತ್ತವೆ. ಮಾತ್ರವಲ್ಲದೆ, ಮಡಕೆಯ ಸುತ್ತ ಸಣ್ಣ ಸಣ್ಣ ರಂಧ್ರಗಳ ಮೂಲಕ ಗಾಳಿಯಾಡುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ತಳಭಾಗದ ಮಡಕೆಗೆ ಮೂರು ಹಿಡಿಯಷ್ಟು ತೆಂಗಿನ ನಾರನ್ನು ಹಾಕಬೇಕು ಬಳಿಕ ಉಳಿದೆರೆಡದುತೆರೆದ ಮಡಕೆಗಳ ತಳಭಾಗಕ್ಕೂ ಪೇಪರ್ ಹಾಕಿ ಒಂದು ಹಿಡಿಯಷ್ಟು ತೆಂಗಿನ ನಾರನ್ನು ಹರಡಬೇಕು. ಬಳಿಕ ಒಂದರ ಮೇಲೊಂದರಂತೆ ಈ ಮಡಕೆಗಳನ್ನು ಇರಿಸಬೇಕು. ಮುಚ್ಚಿರುವ ಮಡಕೆ ತಳಭಾಗದಲ್ಲಿರುತ್ತದೆ. ಮೇಲಿನ ಅಂದರೆ ಮೂರನೆ ಮಡಕೆಗೆ ಮುಚ್ಚಳವಿರುತ್ತದೆ. ಮೇಲಿನ ಮಡಕೆಗೆ ಅಡುಗೆ ಮನೆಯ ತ್ಯಾಜ್ಯವನ್ನು ಹಾಕುತ್ತಿರಬೇಕು. ನಾಲ್ಕರಿಂದ ಆರು ಜನರಿರುವ ಕುಟುಂಬದಲ್ಲಿ ಒಂದು ಮಡಕೆಯಲ್ಲಿ ಹಸಿ ತ್ಯಾಜ್ಯ ತುಂಬಲು ಸುಮಾರು 30 ದಿನಗಳು ಬೇಕಾುತ್ತದೆ ಎಂದು ಸಚಿನ್ ವಿವರಿಸಿದರು.

ಮಾಂಸಾಹಾರಿ- ಸಸ್ಯಾಹಾರಿ ತ್ಯಾಜ್ಯವನ್ನೂ ಹಾಕಬಹುದು !

ಈ ಮಡಕೆ ಗೊಬ್ಬರದ ವಿಶೇಷವೆಂದರೆ ಇದರಲ್ಲಿ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಹಸಿ ತ್ಯಾಜ್ಯವನ್ನು ಹಾಕಬಹುದು. ಅಡುಗೆ ಮನೆಯಲ್ಲಿ ಉತ್ಪತ್ತಿ ಯಾಗುವ ಯಾವುದೇ ತ್ಯಾಜ್ಯವನ್ನೂ ಇದಕ್ಕೆ ಹಾಕಬಹುದು ಎನ್ನುತ್ತಾರೆ ಸಚಿನ್.

ತ್ಯಾಜ್ಯದಲ್ಲಾಗುವ ಹುಳದಿಂದ ಹಾನಿಯಿಲ್ಲ !

ಈ ತ್ಯಾಜ್ಯವು ನಾಲ್ಕೆದು ದಿನಗಳ ಬಳಿಕ ಕೊಳೆತು ಇದರಲ್ಲಿ ‘ಬ್ಲಾಕ್ ಸೋಲ್ಜರ್’ ಎಂಬ ಹುಳಗಳು ಹುಟ್ಟಿಕೊಳ್ಳುತ್ತವೆ. ಅವುಗಳು ತ್ಯಾಜ್ಯವನ್ನು ತಿಂದು ಗೊಬ್ಬರವನ್ನು ಉತ್ಪತ್ತಿ ಮಾಡುತ್ತವೆ. ಈ ಹುಳುಗಳ ಜೀವಿತಾವಧಿ 30ರಿಂದ 35 ದಿನಗಳು. 30 ದಿನಗಳ ಬಳಿಕ ಮೇಲಿರುವ ಮಡಕೆಯ ತ್ಯಾಜ್ಯವನ್ನು ಮಧ್ಯದ ಮಡಕೆಗೆ ವರ್ಗಾಯಿಸೇಕು. ಅಲ್ಲಿ ಅದು ಗೊಬ್ಬರವಾಗಿ ಪರಿವರ್ತನೆಯಾಗಿ ತಳದಲ್ಲಿ ಶೇಖರಣೆಯಾಗುತ್ತದೆ. ಪ್ರತಿನಿತ್ಯ ಇದರಲ್ಲಿ ತ್ಯಾಜ್ಯ ಹಾಕಿದಂತೆ ರಾತ್ರಿ ಹೊತ್ತು ಒಂದು ಪದರ ಅಂದರೆ ಒಂದು ಹಿಡಿಯಷ್ಟು ತೆಂಗಿನ ನಾರನ್ನು ಹರಡಬೇಕು. ತ್ಯಾಜ್ಯದಲ್ಲಿ ಉತ್ಪತ್ತಿಯಾಗುವ ಹುಳಗಳು ಮಡಕೆಯಿಂದ ಹೊರ ಬರುವುದಿಲ್ಲ. ಆ ಹುಳುಗಳು ಪರಿಸರ ಸಹ್ಯ ಆಗಿರುವುದರಿಂದ ಅದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಮಾತ್ರವಲ್ಲದೆ, ಈ ಮಡಕೆ ಗೊಬ್ಬರದ ತ್ಯಾಜ್ಯದಿಂದ ಯಾವುದೇ ರೀತಿಯ ದುರ್ವಾಸನೆ ಕೂಡಾ ಬೀರುವುದಿಲ್ಲ ಎಂದು ಪ್ರಾತ್ಯಕ್ಷಿಕೆ ಮೂಲಕ ಸಚಿನ್ ವಿವರಿಸಿದರು.

ಸಾರ್ವಜನಿಕರಿಗೆ ಮಿತದರಲ್ಲಿ ಮಡಕೆ ಗೊಬ್ಬರ ಸಾಧನ ವಿತರಣೆಗೆ ಯೋಜನೆ

ಈ ತ್ಯಾಜ್ಯದಿಂದ ಉತ್ಪತ್ತಿಯಾಗುವ ಗೊಬ್ಬರ ಕೈತೋಟ, ತೋಟಗಳಿಗೆ ಉಪಯುಕ್ತ. ಈ ಗೊಬ್ಬರವನ್ನು ಪರೀಕ್ಷಿಸಿರುವ ಎಂಸಿಎಫ್‌ನ ತಂಡ ಕೂಡಾ ಉತ್ತಮ ಎಂಬ ವರದಿಯನ್ನು ನೀಡಿದೆ. ಇದರಿಂದ ಮುಂದೆ ನಗರದಲ್ಲಿ ಈ ಮಡಕೆ ಗೊಬ್ಬರ ಬಳಕೆ ಬಗ್ಗೆ ಹೆಚ್ಚಿನ ಒತ್ತು ನೀಡಲು ಮಠದಿಂದ ತೀರ್ಮಾನಿಸಲಾಗಿದೆ. ಈ ಬಗ್ಗೆ ಮಹಾನಗರ ಪಾಲಿಕೆ, ಜಿಲ್ಲಾಡಳಿತದ ಜತೆಗೂ ಮಾತುಕತೆ ಮಾಡಲಾಗಿದೆ. ಈ ಮಡಕೆ ಗೊಬ್ಬರದ ಮಡಕೆಗಳನ್ನು ವಿಶೇಷವಾಗಿ ತಯಾರಿಸಲಾಗುತ್ತಿರುವುದರಿಂದ ಇದಕ್ಕೆ ಸುಮಾರು 3000 ರೂ.ನಷ್ಟು ಖರ್ಚು ತಗಲುತ್ತದೆ. ಮಠವು ಈಗಾಗಲೇ ಸಂಘ ಸಂಸ್ಥೆಗಳ ನೆರವನ್ನು ಕೋರಿದ್ದು, ನಗರದ ಸಾರ್ವಜನಿಕರಿಗೆ ಇದನ್ನು ತಲಾ 500 ರೂ. ದರದಲ್ಲಿ ವಿತರಿಸಲು ಯೋಜನೆಯನ್ನು ರೂಪಿಸುತ್ತಿದೆ ಎಂದು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X