ಜ.19: ಸಹಕಾರಿ ರಂಗದ ಸಾಧಕ ಡಾ. ರಾಜೇಂದ್ರ ಕುಮಾರ್‌ಗೆ ಅಭಿನಂದನಾ ಕಾರ್ಯಕ್ರಮ

ಮಂಗಳೂರು, ನ. 29: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಇದರ ಅಧ್ಯಕ್ಷರಾಗಿ 25 ವರ್ಷಗಳನ್ನು ಪೂರೈಸಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಅವರ ಸೇವೆ ಮತ್ತು ದೇಶದಲ್ಲಿಯೇ ವಿಶೇಷ ಸಾಧನೆಯಾಗಿದೆ ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಜ.19ರಂದು ನಗರದಲ್ಲಿ ಹಮ್ಮಿಕೊಂಡಿರುವುದಾಗಿ ಅಭಿನಂದನಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಡಾ. ರಾಜೇಂದ್ರ ಕುಮಾರ್ ಬ್ಯಾಂಕಿನ ಅಧ್ಯಕ್ಷರಾದ ಬಳಿಕ ಬ್ಯಾಂಕಿನ ಆರ್ಥಿಕ ವ್ಯವಹಾರವನ್ನು 100 ಕೋಟಿಯಿಂದ 6,500 ಕೋಟಿಗೆ ಏರಿಸಿರುವುದು, ಮಹಿಳಾ ಸಬಲೀಕರಣವನ್ನು ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಾಡಿರುವುದು ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಸಹಕಾರಿ ಬ್ಯಾಂಕ್ ಗುರುತಿಸಿಕೊಳ್ಳಲು ಪ್ರಶಸ್ತಿ ಪಡೆದುಕೊಳ್ಳಲು ಕಾರಣರಾಗಿದ್ದಾರೆ.
ಜ.19 ರಂದು ರಾಜೇಂದ್ರ ಕುಮಾರ್ ಬ್ಯಾಂಕಿನ ಅಧ್ಯಕ್ಷರಾಗಿ 25ವರ್ಷಗಳನ್ನು ಪುರ್ಣಗೊಳಿಸಲಿದ್ದಾರೆ. ಈ ಸಂದರ್ಭ ಸಮಸ್ತ ಸಹಕಾರಿ ಕ್ಷೇತ್ರದ ಜನರಿಗೆ ಈ ಸಂಭ್ರಮವನ್ನು ಹಮ್ಮಿಕೊಳ್ಳುವುದು ಸೂಕ್ತ ಎನ್ನುವ ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ರಾಜ್ಯದ ಮುಖ್ಯ ಮಂತ್ರಿ ,ಕೇಂದ್ರ ಸಚಿವರಿಗೆ ಆಹ್ವಾನ:- ಜನವರಿ 19ರಂದು ನಗರದ ಬ್ಯಾಂಕಿನ ಮುಂಭಾಗದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನೆಹರು ಮೈದಾನದವರೆಗೆ ನಡೆಯಲಿದೆ. ನೆಹರು ಮೈದಾನದಲ್ಲಿ ರಾಜ್ಯದ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಕೇಂದ್ರದ ಸಚಿವರು ಸಹಕಾರಿ ಕ್ಷೇತ್ರದ ಗಣ್ಯರು, ನಬಾರ್ಡ್ ಅಧ್ಯಕ್ಷರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಕಡೆಗಳ ಪ್ರತಿನಿಧಿಗಳು ಸೇರಿ ಸುಮಾರು 2 ಲಕ್ಷ ಜನರ ಬೃಹತ್ ಸಮಾವೇಶ ನಡೆಯಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ವಸ್ತು ಸಂಗ್ರಹಾಲಯ ನಿರ್ಮಾಣ:- ರಾಜೇಂದ್ರ ಕುಮಾರ್‌ರವರ ಅಧ್ಯಕ್ಷತೆಯ 25ವಷಾಚರಣೆಯ ಈ ಸಂದರ್ಭದಲ್ಲಿ ಸಹಕಾರಿ ರಂಗದ ವಿಶೇಷತೆ ಗಳನ್ನೊಳಗೊಂಡ ಶಾಸ್ವತ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ರಾಷ್ಟ್ರೀಯ ವಿಚಾರ ಸಂಕಿರಣ:- ಈ ಕಾರ್ಯಕ್ರಮದ ಅಂಗವಾಗಿ ಜ.18 ರಂದು ನಗರದಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆರಾಷ್ಟ್ರ ಮಟ್ಟದ ವಿಚಾರ ಸಮಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸನ್ಮಾನ ಸಮಿತಿ ರಚನೆ:- ಡಾ.ಎಂ.ಎನ್.ರಾಜೇಂದ್ರ ಕುಮಾರ್‌ರವರನ್ನು ಸನ್ಮಾನಿಸಲು ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಸಚಿವ ಅಮರನಾಥ ಶೆಟ್ಟಿ ಕ್ಯಾಂಪ್ಕೋ ದ ಮುಖಂಡರಾದ ಕೊಂಕೋಡಿ ಪದ್ಮನಾಭ ಮೊದಲಾದವರ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ಹಿರಿಯ ನಿರ್ದೇಶಕ ಟಿ.ಜೆ. ರಾಜರಾಮ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಬ್ಯಾಂಕಿನ ಹಿರಿಯ ನಿರ್ದೇಶಕರಾದ ಟಿ.ಜೆ. ರಾಜರಾಮಭಟ್ ಹಾಗೂ ಆಡಳಿತ ಮಂಡಳಿಯ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರು ಗಳಾದ ಎಸ್.ಬಿ ಜಯರಾಮ ರೈ, ಶಶಿ ಕುಮಾರ್ ರೈ, ರಮೇಶ್ ಶೆಟ್ಟಿ, ಸದಾಶಿವ ಉಳ್ಳಾಲ, ಬಿ. ರಘುರಾಮ ಶೆಟ್ಟಿ ಮೊದಲಾದವರು ಉಪಸ್ಥಿರಿದ್ದರು.