ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ 28 ಮಂದಿ, 4 ಸಂಸ್ಥೆಗಳ ಆಯ್ಕೆ

ಇಸ್ಮಾಯಿಲ್ ಸಾಹೇಬ್ - ಆರ್.ಜೆ.ಕಾಜಲ್
ಉಡುಪಿ, ನ.29: 2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ದುಡಿದ ಒಟ್ಟು 28 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಮೂರು ಯುವಕ, ಯುವತಿ ಮಂಡಲಗಳೂ ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿವೆ.
ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ
ಯಕ್ಷಗಾನ: 1. ಗೋಪಾಲ ಆಚಾರ್ಯ ತೀರ್ಥಹಳ್ಳಿ, 2. ಗೋಪಾಲ ಗಾಣಿಗ ಹೇರಂಜಾಲು, 3. ರಾಘವೇಂದ್ರ ಆಚಾರ್ಯ, 4. ಎಂ.ಎಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು.
ಕೃಷಿ: 5.ಡಾ.ಕೆ.ನರೇಂದ್ರ ಪೈ
ಶಿಕ್ಷಣ: 6.ಎಂ. ಇಸ್ಮಾಯಿಲ್ ಸಾಹೇಬ್
ಸಮಾಜ ಸೇವೆ: 7.ರಾಮದಾಸ್ ಪಾಲನ್, 8. ಮನೋಹರ್ ಶೆಟ್ಟಿ, 9. ತಾರಾನಾಥ ಮೇಸ್ತ ಶಿರೂರು, 10. ಜೋಸೆಫ್ ಜಿ.ಎಂ.ರೆಬೆಲ್ಲೊ.
ಧಾರ್ಮಿಕ: 11. ಬಾರ್ಕೂರು ಹೃಷಿಕೇಶ ಬಾಯರಿ, 12. ಎನ್. ಬಾಲಕೃಷ್ಣ ವೈದ್ಯ.
ಸಂಗೀತ: 13.ಪರಮೇಶ್ವರ ಭಟ್, 14. ಆರ್. ಶ್ರೀಶದಾಸ್, 15. ಹಿರಿಯಣ್ಣ, 16.ವಿದೂಷಿ ಪ್ರವಿತಾ ಅಶೋಕ.
ಜಾನಪದ: 17.ಶೀನ ಪಾಣರ, 18. ಹುಬಾಶಿಕ ಕೊರಗರ ಯುವ ಕಲಾ ವೇದಿಕೆ.
ಕಲೆ/ನಾಟಕ/ರಂಗಭೂಮಿ/ಸಿನಿಮಾ ಕಲಾವಿದರು: 19. ಜಯರಾಂ ನೀಲಾವರ, 20. ಆರ್.ಜೆ.ಕಾಜಲ್ (ಮಂಗಳಮುಖಿ), 21. ಶ್ಲಾಘ ಸಾಲಿಗ್ರಾಮ.
ಕ್ರೀಡೆ: 22. ಅಕ್ಷತಾ ಪೂಜಾರಿ, 23. ಮೃಣಾಲಿ ಸಚಿನ್ ಶೆಟ್ಟಿ (ಅಂತರಾಷ್ಟ್ರೀಯ ಕರಾಟೆ ಪಟು), 24. ಗುರುರಾಜ ಪೂಜಾರಿ.
ಸಾಹಿತ್ಯ: 25. ಟಿ.ಎಸ್.ಹುಸೈನ್, 26. ವಾಸಂತಿ ಅಂಬಲಪಾಡಿ.
ಕಲೆ ಮತ್ತು ಶಿಲ್ಪಕಲೆ: 27. ಲಾರೆನ್ ಪಿಂಟೋ.
ಪತ್ರಿಕೋದ್ಯಮ: 28.ಗೋಕುಲ್ದಾಸ್ ಪೈ.
ಸಂಕೀರ್ಣ: 29.ಶೇಖರ ಅಜೆಕಾರು
ಸಂಘ-ಸಂಸ್ಥೆಗಳು: 30. ಸಮೃದ್ಧಿ ಮಹಿಳಾ ಮಂಡಳಿ ಚೇರ್ಕಾಡಿ, 31. ಜಲದುರ್ಗಾ ಮಹಿಳಾ ಸಂಘ, 32. ಯುವಕ ಮಂಡಲ ಸಾಣೂರು.