ದಿಲ್ಲಿಯೆಡೆಗೆ ರೈತರ ದಂಡು
ಕೃಷಿಕರ ಸಂಕಷ್ಟ ಚರ್ಚಿಸಲು ಸಂಸತ್ತಿನಲ್ಲಿ 21 ದಿನಗಳ ವಿಶೇಷ ಅಧಿವೇಶನ ನಡೆಸುವಂತೆ, ಕೃಷಿ ಸಾಲ ಮನ್ನಾ ಕುರಿತು ಸಂಸತ್ ಸದಸ್ಯರ ಎರಡು ಖಾಸಗಿ ಮಸೂದೆ ಅಂಗೀಕರಿಸುವಂತೆ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಭರವಸೆ ನೀಡುವಂತೆ ಆಗ್ರಹಿಸಿ ದಿಲ್ಲಿಯಲ್ಲಿ ಬೃಹತ್ ರ್ಯಾಲಿ ನಡೆಸಲು ದೇಶಾದ್ಯಂತ ರೈತರು ಇಲ್ಲಿಗೆ ಆಗಮಿಸುತ್ತಿದ್ದಾರೆ. 200ಕ್ಕೂ ಅಧಿಕ ಸಂಘಟನೆಗಳನ್ನು ಒಳಗೊಂಡ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಬೆಂಬಲದಲ್ಲಿ ಸಿಪಿಎಂ-ಅಖಿಲ ಭಾರತ ಕಿಸಾನ್ ಸಭಾ ಎರಡು ದಿನಗಳ ಬೃಹತ್ ರ್ಯಾಲಿ ಆಯೋಜಿಸಿದೆ. 1 ಲಕ್ಷಕ್ಕೂ ಅಧಿಕ ರೈತರು ಈ ಎರಡು ದಿನಗಳ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ದಿಲ್ಲಿಯಲ್ಲಿ ನಡೆಯುವ ರೈತರ ಅತಿ ದೊಡ್ಡ ಸಮಾವೇಶದಲ್ಲಿ ಇದು ಒಂದಾಗಲಿದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿದೆ.
Next Story





