ಸಚಿವ ಅರುಣ್ ಜೇಟ್ಲಿಯಿಂದ ಜಾಫರ್ ಶರೀಫ್ ಕುಟುಂಬಸ್ಥರಿಗೆ ಸಾಂತ್ವನ

ಬೆಂಗಳೂರು, ನ.29: ಹಿರಿಯ ಕಾಂಗ್ರೆಸ್ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಕುಟುಂಬಸ್ಥರನ್ನು ಭೇಟಿ ಮಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಾಂತ್ವನ ಹೇಳಿದರು.
ಕಳೆದ ರವಿವಾರ ಕಾಂಗ್ರೆಸ್ ನಾಯಕ ಜಾಫರ್ ಶರೀಫ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ರಾಜಕೀಯ ಕ್ಷೇತ್ರದಲ್ಲಿ ಜಾಫರ್ ಶರೀಫ್‌ರವರ ಕೊಡುಗೆಗಳನ್ನು ಸ್ಮರಿಸಿದರು.
Next Story





