ಪುಲ್ವಾಮ: ಇಬ್ಬರು ಉಗ್ರರ ಹತ್ಯೆ

ಶ್ರೀನಗರ, ನ. 29: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಇಬ್ಬರು ಉಗ್ರರು ಹತರಾಗಿದ್ದಾರೆ.
ಬುಡ್ಗಾವ್‌ನಲ್ಲಿ ಭದ್ರತಾ ಪಡೆ ಯೋಧರು ಲಷ್ಕರೆ ತಯ್ಯಿಬದ ಉನ್ನತ ಕಮಾಂಡರ್ ನವೀದ್ ನನ್ನು ಹೊಡೆದುರುಳಿಸಿದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ. ಹತನಾದ ಉಗ್ರರನ್ನು ಹಿಜ್ಬುಲ್‌ನ ಅದಾನ್ ಲೋನೆ ಹಾಗೂ ಆದಿಲ್ ಭಟ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಂತಿಪುರದ ಖ್ರೀವ್‌ನ ಶರ್ಶಾಲಿ ಪ್ರದೇಶದಲ್ಲಿ ಉಗ್ರರು ಅವಿತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿಯಾಗ ಕಾರ್ಯಾಚರಣೆ ನಡೆಸಿ ಆ ಪ್ರದೇಶವನ್ನು ಸುತ್ತುವರಿಯಿತು ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ನಡೆಯುತ್ತಿದ್ದಾಗ ಉಗ್ರರು ದಾಳಿ ನಡೆಸಿದರು. ಇದಕ್ಕೆ ಯೋಧರು ಹಾಗೂ ಪೊಲೀಸರು ಪ್ರತಿದಾಳಿ ನಡೆಸಿದರು. ಈ ದಾಳಿಯಲ್ಲಿ ಇಬ್ಬರು ಉಗ್ರರು ಹತರಾದರು. ಅವರ ಮೃತದೇಹಗಳನ್ನು ಪತ್ತೆ ಮಾಡಿಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





