ಡಿ. 2: ಸಜಿಪದಲ್ಲಿ ಬಂಟವಾಳ ತಾಲೂಕು ಮಟ್ಟದ ಬಂಟರ ಕ್ರೀಡೋತ್ಸವ

ಬಂಟ್ವಾಳ, ನ. 29: ಬಂಟರ ಸಂಘ ಬಂಟವಾಳ ತಾಲೂಕು, ಬಂಟವಾಳ ಬಂಟರ ಭವನ ತುಂಬೆ ಇದರ ನೇತೃತ್ವದಲ್ಲಿ ಬಂಟವಾಳ ತಾಲೂಕಿನ ಎಲ್ಲ ವಲಯ ಬಂಟರ ಸಂಘದ ಸಹಯೋಗದಿಂದ ಡಿ. 2ರಂದು ಬೆಳಗ್ಗೆ 9ರಿಂದ ಬಂಟವಾಳ ತಾಲೂಕು ಮಟ್ಟದ ಬಂಟರ ಕ್ರೀಡೋತ್ಸವ ಸಜಿಪ ಶ್ರೀ ಕ್ಷೇತ್ರ ಮಿತ್ತಮಜಲು ಮೈದಾನದಲ್ಲಿ ನಡೆಯಲಿದೆ ಎಂದು ಬಂಟರ ಸಂಘ ಬಂಟವಾಳ ತಾಲೂಕು ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ತಿಳಿಸಿದ್ದಾರೆ.
ಅವರು ಗುರುವಾರ ರಾತ್ರಿ ತುಂಬೆಯ ಬಂಟರ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಸಜಿಪ ವಲಯ ಬಂಟರ ಸಂಘದ ಪ್ರಾಯೋಜಕತ್ವದಲ್ಲಿ ನಡೆದಲಿದೆ. ಸಂಘದ ತಾಲೂಕು ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಕ್ರೀಡೋತ್ಸವವನ್ನು ಉದ್ಘಾಟಿಸುವರು. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಂಬೈ ಕಾರ್ಪೊರೇಟರ್ ಸಂತೋಷ್ ಶೆಟ್ಟಿ ದಲಂದಿಲ, ಉದ್ಯಮಿ ಆನಂದ ರೈ ಮಾಡಂತಾಡಿಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ಎಲ್ ಕೆಜಿಯಿಂದ 60 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಕ್ರೀಡಾಕೂಟದಲ್ಲಿ ಸ್ವತಂತ್ರ ಸ್ಪರ್ಧೆಗಳು, ಗುಂಪು ಸ್ಪರ್ಧೆಗಳಾದ ಕಬಡ್ಡಿ, ತ್ರೋಬಾಲ್, ವಾಲಿಬಾಲ್, ಹಗ್ಗಜಗ್ಗಾಟ, ಬಾಂಬ್ ಇನ್ ದಿ ನಂಬರ್ ಎಂಬ ಮನೋರಂಜನಾ ಸ್ಪರ್ಧೆಯನ್ನು ಏರ್ಪಡಿಸ ಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಜಿಪ ವಲಯ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಉಪಾಧ್ಯಕ್ಷ ಕಿರಣ್ ಹೆಗ್ಡೆ, ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ಪಿ.ರೈ, ಕ್ರೀಡೋತ್ಸವ ಸಮಿತಿಯ ಗಂಗಾಧರ್ ರೈ, ಜಗದೀಶ್, ನಿತಿನ್ ಅರಸ, ಬಾಲಕೃಷ್ಣ ಅರಸ ಉಪಸ್ಥಿತರಿದ್ದರು.