ಕೊಣಾಜೆ : ಜಮೀಯ್ಯತುಲ್ ಫಲಾಹ್‌ನಿಂದ ಕಾರ್ಯಾಗಾರ

ಮಂಗಳೂರು, ನ.30: ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಘಟಕ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷ ಪೂರ್ವ ತರಬೇತಿ ಮತ್ತು ಅಧ್ಯಯನ ತಂತ್ರ ‘ಗೆಲುನ ಗುಟ್ಟು’ ಎಂಬ ಕಾರ್ಯಾಗಾರವು ಇತ್ತೀಚೆಗೆ ಕೊಣಾಜೆ ಸಮೀಪದ ಅಡ್ಕರಪಡ್ಪುವಿನ ಜಮೀಯ್ಯತುಲ್ ಫಲಾಹ್ ಅಧೀನದ ಗ್ರೀನ್ ವ್ಯೆವ್ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು.
ಶಾಲೆ ಹಾಗೂ ಕಾಲೇಜಿನ ಪ್ರಾಂಶುಪಾಲ ಅಬೂಬಕರ್ ಕಾರ್ಯಾಗಾರ ಉದ್ಘಾಟಿಸಿದರು. ಶಾಲೆಯ ಸಂಚಾಲಕ ಎಂ.ಎಚ್. ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತರಬೇತಿದಾರ ಸಂತೋಷ್ ಶೆಟ್ಟಿ ಕಾರ್ಯಗಾರ ನಡೆಸಿಕೊಟ್ಟರು.
ಸಂಸ್ಥೆಯ ಕಾರ್ಯದರ್ಶಿ ಸಲೀಂ ಹಂಡೇಲ್, ಕಾರ್ಯಾಗಾರದ ಸಂಚಾಲಕ ಎಸ್.ಎ.ಗಫೂರ್ ಹಾಗೂ ಆಡಳಿತಗಾರ ಸಮೀರ್ ಅಹ್ಮದ್ ಕುದ್ರೋಳಿ ಪಾಲ್ಗೊಂಡಿದ್ದರು.
Next Story