ಸಮಾಜದ ಏಳಿಗೆಗೆ ಶಿಕ್ಷಣದ ಅಗತ್ಯತೆ ಇದೆ: ಮಸ್‍ಹೂದ್ ಸಖಾಫಿ
ಕೊಣಾಜೆ, ನ. 30 :ಪ್ರವಾದಿಯವರ ಜೀವ ಚರಿತ್ರೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಜೀವನದಲ್ಲಿ ಅವಳಡಿಸಿಕೊಂಡರೆ ಸಮಾಜದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಸಮಾಜದ ಏಳಿಗೆಗೆ ಶಿಕ್ಷಣದ ಅಗತ್ಯತೆ ಇದೆ. ಅದನ್ನು ಎಲ್ಲರೂ ಪಡಕೊಳ್ಳಬೇಕು ಎಂದು ಮಸ್‍ಹೂದ್ ಸಖಾಫಿ ಗೂಡಲ್ಲೂರು ಹೇಳಿದರು.
ಅವರು ಎಸ್‍ಎಸ್‍ಎಫ್ ಮಂಜನಾಡಿ ಸೆಕ್ಟರ್ ಇದರ ಆಶ್ರಯದಲ್ಲಿ ಮಂಜನಾಡಿಯಲ್ಲಿ ಗುರುವಾರ ನಡೆದ ಹುಬ್ಬುರ್ರಸೂಲ್ ಕಾನ್ಫರೆನ್ಸ್‍ನಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಬೆಳವಣಿಗೆಗೆ ಶಿಕ್ಷಣವೇ ಆಧಾರವಾಗಿದ್ದು, ಅದನ್ನು ಬೆಳೆಸಬೇಕೆಂದು ಕರೆ ನೀಡಿದರು. ಸಯ್ಯದ್ ಮುಹಮ್ಮದ್ ಯಾಸೀನ್ ಶಖಾಫಿ ಅಲ್‍ಹೈದ್ರೋಸಿ ದುವಾ ಆಶೀರ್ವಚನ ನೀಡಿದರು. ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ ಉದ್ಘಾಟಿಸಿದರು. ಅಬ್ದುಲ್ ಅಝೀಝ್ ಮೈಸೂರು ಬಾವ, ಎನ್.ಎಸ್ ಕರೀಂ, ಆಲಿಕುಂಞಿ ಪಾರೆ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಮುನೀರ್ ಸಖಾಫಿ, ಮಂಜನಾಡಿ ಜಮಾಅತ್ ಕಾರ್ಯದರ್ಶಿ ಅಝೀಝ್ ಮಂಜನಾಡಿ, ಎಸ್ಸಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಮೌಲಿದ್, ಬುರ್ದಾ ಆಲಾಪನೆ ನಡೆಯಿತು. ಇಷ್ಕೇ ಮದೀನ ಬುರ್ದಾ ತಂಡ ಬುರ್ದಾ ಆಲಾಪನೆ ಮಾಡಿದರು ಮಾಡಿದರು. ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಸ್ವಾಗತಿಸಿದರು