ಡಿ. 1ರಂದು ಪಾರಿಕ್ಕರ್‌ರಿಂದ ಬಿಜೆಪಿ ಶಾಸಕರು, ಅಧಿಕಾರಿಗಳ ಭೇಟಿ

ಪಣಜಿ, ನ. 30: ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ತಮ್ಮ ಖಾಸಗಿ ನಿವಾಸದಲ್ಲಿ ಡಿಸೆಂಬರ್ 1ರಂದು ರಾಜ್ಯ ಬಿಜೆಪಿ ಶಾಸಕರು ಹಾಗೂ ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.
ಹೊಸದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಅಕ್ಟೋಬರ್ 14ರಂದು ಬಿಡುಗಡೆಯಾದ ಬಳಿಕ ಇಲ್ಲಿಗೆ ಸಮೀಪದ ದೋನಾ ಪೌಲಾದಲ್ಲಿರುವ ಖಾಸಗಿ ನಿವಾಸದಲ್ಲಿರುವ ಪಾರಿಕ್ಕರ್ ಚೇತರಿಸಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಅವರು ಮೊದಲು ಅಧಿಕಾರಿಗಳೊಂದಿಗೆ ಮಾತಕತೆ ನಡೆಸಲಿದ್ದಾರೆ. ಬಿಜೆಪಿ ಶಾಸಕರು ಹಾಗೂ ಸಚಿವರೊಂದಿಗಿನ ಮಾತುಕತೆ ಬಳಿಕ ಅವರು ಸರಕರಾದ ಆಡಳಿತದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾರಿಕ್ಕರ್ ಅವರು ಆರೋಗ್ಯ ಸುಧಾರಿಸಿದೆ. ಬಾಕಿ ಇರುವ ಕೆಲಸಗಳು ಹಾಗೂ ವಿವಿಧ ಕಡತಗಳನ್ನು ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪಾರಿಕ್ಕರ್ ಅವರು ಅಕ್ಟೋಬರ್ 31ರಂದು ರಾಜ್ಯ ಸಂಪುಟದ ಸಭೆ ನಡೆಸಿದ್ದರು. ಮುಂದಿನ ದಿನ ಪಕ್ಷದ ಅಧಿಕೃತರನ್ನು ಭೇಟಿಯಾಗಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಹಲವು ಸರಕಾರೇತರ ಸಂಸ್ಥೆಗಳು ಹಾಗೂ ವಿಪಕ್ಷ ಕಾಂಗ್ರೆಸ್ ಪಾರಿಕ್ಕರ್ ಅವರ ಮೇಲೆ ಒತ್ತಡ ಹೇರಿತ್ತು. ರಾಜ್ಯದಲ್ಲಿ ಆಡಳಿತ ಪುನರ್ ಸ್ಥಾಪಿಸುವಂತೆ ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ರಾಜನ್ ಘಾಟೆ 11 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು.