ಮುಂಬೈಯಲ್ಲಿ ರೈಲು ಢಿಕ್ಕಿ: ಪಡುಬಿದ್ರೆ ಉದ್ಯಮಿ ಮೃತ್ಯು

ಪಡುಬಿದ್ರೆ, ನ. 30: ಮುಂಬೈಯ ಹೊಟೇಲ್ ಉದ್ಯಮಿ ಮೆಟ್ರೋ ರೈಲು ಅಪಘಾತದಲ್ಲಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೂಲತಃ ನಂದಿಕೂರಿನ ಅಡ್ವೆಯ ತೆಂಕು ಮನೆಯ ನಿವಾಸಿ ರಜನಿಕಾಂತ್ ರೈ (48) ಮೃತರು ಎಂದು ಗುರುತಿಸಲಾಗಿದೆ.
ಅವರು ಮುಂಬೈಯ ಜೊಗೇಶ್ವರಿ ಮೆಟ್ರೋ ರೈಲು ನಿಲ್ದಾಣದಲ್ಲಿ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಇನ್ನೊಂದು ರೈಲು ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಅಪಘತದಿಂದ ತೀವ್ರಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.
ಮುಲ್ಕಿ ವಿಜಯ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ಮುಂಬೈಗೆ ತೆರಳಿದ್ದರು. ಬಳಿಕ ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಧಾರ್ಮಿಕ, ಶೈಕ್ಷಣಿಕಿ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರು ನಂದಿಕೂರು ಹಳೆ ವಿದ್ಯಾರ್ಥಿ ಸಂಘ ಹಾಗೂ ನಂದಿಕೂರು ಶಾಲೆಯ ಮುಂಬೈಯ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
Next Story