ಉಡುಪಿ: ಫಲಾನುಭವಿಗಳಿಗೆ ಹಕ್ಕುಪತ್ರ, ವಿವಿಧ ಸವಲತ್ತುಗಳ ವಿತರಣೆ

ಉಡುಪಿ, ನ.30: ಉಡುಪಿ ಹಾಗೂ ಕಾಪು ತಾಲೂಕು ವ್ಯಾಪ್ತಿಯ ಕಂದಾಯ ಇಲಾಖೆಯ ವಿವಿಧ ಸವಲತ್ತುಗಳ ವಿತರಣಾ ಸಮಾರಂಭವು ಶುಕ್ರವಾರ ಉಡುಪಿ ತಾಪಂ ಸಭಾಂಗಣದಲ್ಲಿ ಜರಗಿತು.
ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ, ಜನಸಾಮಾನ್ಯರ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳು ಅರ್ಹ ಪ್ರತಿಯೊಬ್ಬರಿಗೆ ತಲು ಪುವಲ್ಲಿ ಲೋಪವಾಗಿದೆ. ಆದುದರಿಂದ ನಾಗರಿಕರು ಜಿಲ್ಲಾಧಿಕಾರಿ ಕಚೇರಿ ಯಿಂದ ಮಾಹಿತಿ ಪಡೆದು ಯೋಜನೆಗಳ ಪ್ರಯೋಜನವನ್ನು ಪಡೆಯಬೇಕು ಎಂದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಉದ್ಯೋಗಿನಿ ಯೋಜನೆ ಯಲ್ಲಿ 45 ವರ್ಷ ಒಳಗಿನ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭಿಸಲು 3ಲಕ್ಷ ರೂ. ಸಾಲ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ 1.5 ಲಕ್ಷ ರೂ. ಸಬ್ಸಿಡಿ ಹಾಗೂ ಇತರೆ ವರ್ಗದ ವರಿಗೆ ಶೇ.30 ಸಬ್ಸಿಡಿ ದೊರೆಯಲಿದೆ. ಕಿರುಸಾಲ ಯೋಜನೆಯಲ್ಲಿ 10 ಲಕ್ಷ ರೂ. ಸಾಲ ದೊರೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮನಸ್ವಿನಿ ಯೋಜನೆಯ 4, ವೃದ್ದಾಪ್ಯ ವೇತನದ 37, ಸಂಧ್ಯಾ ಸುರಕ್ಷಾ ಯೋಜನೆಯ 21 ಮತ್ತು 2 ವಿಕಲಚೇತನರಿಗೆ ವಿವಿಧ ಸವ ಲತ್ತುಗಳನ್ನು, ವಡಭಾಂಡೇಶ್ವರ ದೇಗುಲಕ್ಕೆ ಆರಾಧನಾ ಸ್ಕೀಮ್‌ನಡಿ ಮಂಜೂ ರಾದ ಒಂದು ಲಕ್ಷ ರೂ. ಸಹಾಯಧನ, ಹಾಗೂ ಕಾಪು ಮತ್ತು ಉಡುಪಿ ತಾಲೂಕಿನ 15 ಮಂದಿಗೆ 94ಸಿಸಿಯಡಿ ಹಕ್ಕುಪತ್ರಗಳನ್ನು ಸಚಿವರು ವಿತರಿಸಿದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾದ್ಯಕ್ಷ ರಾಜೇಂದ್ರ ಪಂದುಬೆಟ್ಟು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜು, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮೊದ ಲಾದವರು ಉಪಸ್ಥಿತರಿದ್ದರು.