ರಾಜ್ಯ ವಕೀಲರ ಪರಿಷತ್‌ನ ನೂತನ ಅಧ್ಯಕ್ಷ ಕೆ.ಬಿ.ನಾಯಕ್ ಅಧಿಕಾರ ಸ್ವೀಕಾರ
ಬೆಂಗಳೂರು, ನ.30: ರಾಜ್ಯ ವಕೀಲರ ಪರಿಷತ್ ನೂತನ ಅಧ್ಯಕ್ಷರಾಗಿ ಕೆ.ಬಿ.ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಬಿ.ವಿ.ಶ್ರೀನಿವಾಸ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಬೆಳಗಾವಿ ವಕೀಲ ಕೆ.ಬಿ.ನಾಯಕ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ ವಕೀಲ ಬಿ.ವಿ.ಶ್ರೀನಿವಾಸ್ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ನಗರದ ರಾಜ್ಯ ವಕೀಲರ ಪರಿಷತ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಬ್ಬರು ಅಧಿಕಾರ ಸ್ವೀಕರಿಸಿದರು. ಅಲ್ಲದೆ, ಇದೇ ವೇಳೆ 23 ನೂತನ ಸದಸ್ಯರಿಗೆ ಚುನಾವಣಾ ವೀಕ್ಷಕರಾಗಿದ್ದ ನಿವೃತ್ತ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಪ್ರಮಾಣ ವಚನ ಬೋಧಿಸಿದರು.
ಹಾಗೆಯೇ, ಅಖಿಲ ಭಾರತ ವಕೀಲರ ಪರಿಷತ್ ಸದಸ್ಯರನ್ನಾಗಿ ಕರ್ನಾಟಕ ವಕೀಲ ಪರಿಷತ್ ನಿರ್ದೇಶಕರೂ ಆದ ಹಿರಿಯ ವಕೀಲ ವೈ.ಆರ್.ಸದಾಶಿವರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು. ವಕೀಲರ ಪರಿಷತ್ತಿನ 25 ಸದಸ್ಯರ ಸ್ಥಾನಗಳಿಗೆ 2018ರ ಮಾರ್ಚ್ 27ರಂದು ಚುನಾವಣೆ ನಡೆದು, ಜುಲೈ 7ರಂದು ಫಲಿತಾಂಶ ಘೋಷಿಸಲಾಗಿತ್ತು.
ಸದಸ್ಯರು: ಕೆ.ಬಿ.ನಾಯಕ್ (ಅಧ್ಯಕ್ಷ), ಬಿ.ವಿ.ಶ್ರೀನಿವಾಸ (ಉಪಾಧ್ಯಕ್ಷ), ಕಿವಾಡ ಕಲ್ಮೇಶ್ವರ ತುಕಾರಾಂ, ಎಂ.ದೇವರಾಜ, ಪಿ.ಪಿ.ಹೆಗ್ಡೆ, ವೈ.ಆರ್.ಸದಾಶಿವ ರೆಡ್ಡಿ, ಎಚ್.ಎಲ್.ವಿಶಾಲ್ ರಘು, ಎನ್.ಶಿವಕುಮಾರ್, ಆರ್.ರಾಜಣ್ಣ, ಕಮ್ಮರಡ್ಡಿ ವೆಂಕಾರಡ್ಡಿ ದೇವರಡ್ಡಿ, ಎಲ್.ಶ್ರೀನಿವಾಸ ಬಾಬು, ಅಸೀಫ್ ಅಲಿ ಶೇಖ್ ಹುಸೇನ್, ಎಸ್.ಎಫ್.ಗೌತಮ ಚಂದ್, ಎಸ್.ಎಲ್.ಭೋಜೇಗೌಡ, ಬಿ.ಆರ್.ಚಂದ್ರವೌಳಿ, ಮೋತಕಪಲ್ಲಿ ಕಾಶಿನಾಥ, ಮಗದುಂ ಆನಂದ ಕುಮಾರ್ ಅಪ್ಪು, ಮುನಿಯಪ್ಪ, ಎಸ್.ಬಸವರಾಜು, ಜೆ.ಎಂ.ಅನಿಲ್ ಕುಮಾರ್, ಎಸ್.ಹರೀಶ್, ಮಂಗಳೇಕರ್ ವಿನಯ ಬಾಳಾಸಾಹೇಬ, ಕಂದಿಮಲ್ಲ ಕೋಟೇಶ್ವರ ರಾವ್, ಎಂ.ಎನ್.ಮಧುಸೂಧನ, ಎಸ್.ಎಸ್.ಮಿಠ್ಠಲಕೋಡ.







