ವಿಕಲಚೇತನರ ದಿನಾಚರಣೆ ಪ್ರಯುಕ್ತ ಸಾಂದರ್ಭಿಕ ರಜೆ
ಬೆಂಗಳೂರು, ನ.30: ವಿಶ್ವ ವಿಕಲಚೇತನ ದಿನಾಚರಣೆ ಪ್ರಯುಕ್ತ ಡಿ.3ರಂದು ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ವಿಕಲಚೇತನರಿಗೆ ಯಾವುದೇ ಟಿಎ, ಡಿಎ ಸೌಲಭ್ಯಕ್ಕೆ ಅವಕಾಶವಿರುವುದಿಲ್ಲವೆಂಬ ಷರತ್ತಿನೊಂದಿಗೆ ಒಂದು ದಿನ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಆದೇಶ ಹೊರಡಿಸಿದೆ.
Next Story





