ಜೇನುನೊಣಗಳ ದಾಳಿಗೆ ಮಹಿಳೆ ಬಲಿ
ಕೋಟ, ನ.30: ಜೇನುನೊಣಗಳ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಐರೋಡಿ ಗ್ರಾಮದ ಕಾರಂತರಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಬಡಾಬೆಟ್ಟು, ಅನ್ಲಾಡಿ ಮಠ, ಐರೋಡಿ ಗ್ರಾಮ, ಸಾಸ್ತಾನ ರಾಮ ದೇವಾಡಿಗ ಎಂಬವರ ಪತ್ನಿ ಬೇಬಿ ದೇವಾಡಿಗ(56) ಎಂದು ಗುರುತಿಸ ಲಾಗಿದೆ.
ನ.28ರಂದು ಕಾರಂತರಬೆಟ್ಟು ಎಂಬಲ್ಲಿ ತೋಟದ ಕೆಲಸಕ್ಕೆ ಹೋಗಿದ್ದ ಇವರಿಗೆ ಜೇನುನೊಣಗಳ ಗುಂಪು ಕಚ್ಚಿದ್ದು, ಕೂಡಲೇ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರವಾಗಿ ಗಾಯಗೊಂಡ ಅವರು ನ.29ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story