ಜುಗಾರಿ: ಮೂವರ ಬಂಧನ
ಕುಂದಾಪುರ, ನ.30: ಕೊಟೇಶ್ವರ ಗ್ರಾಮದ ಅಂಕದಕಟ್ಟೆ ಗೋಪಲಾಡಿ ರಸ್ತೆಯಲ್ಲಿ ನ.30ರಂದು ಬೆಳಗ್ಗೆ ಗರಗರ ಮಂಡಲ ಜುಗಾರಿ ಆಟ ಆಡುತ್ತಿದ್ದ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯರಾದ ರತ್ನಾಕರ ದೇವಾಡಿಗ(45), ಪ್ರಸನ್ನ ದೇವಾಡಿಗ (27), ವೀರಭದ್ರ (45) ಬಂಧಿತ ಆರೋಪಿಗಳು. ಇವರಿಂದ 600 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story