ಮೃತದೇಹ ಪತ್ತೆಗೆ ಮನವಿ
ಬೆಂಗಳೂರು, ನ.30: ರಸ್ತೆಬದಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ವಾರಸುದಾರರ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.
ಮಂಗಳವಾರ ನಗರದ ಕಬ್ಬನ್ಪೇಟೆಯ ಸಿದ್ದಣ್ಣ ಲೇನ್ನ ರಸ್ತೆಯಲ್ಲಿ 30 ವರ್ಷದ ಯುವಕನ ಮೃತ ದೇಹ ಪತ್ತೆಯಾಗಿದೆ. ಆದರೆ, ಈತ ಯಾವ ಕಾರಣಕ್ಕೆ ಮೃತಪಟ್ಟಿದ್ದಾನೆ ಎಂದು ಸಾಧ್ಯಕ್ಕೆ ತಿಳಿದುಬಂದಿಲ್ಲ.
ಮೇಲ್ನೋಟಕ್ಕೆ ಈತ ಭಿಕ್ಷುಕನಂತೆ ಕಂಡುಬರುತ್ತಿದ್ದು, ಸುಮಾರು 5.6 ಅಡಿ ಎತ್ತರ, ದುಂಡು ಮುಖ, ಕಪ್ಪು ಮೈಬಣ್ಣ, ಸಣಕಲು ದೇಹ ಹೊಂದಿದ್ದಾನೆ. ಈ ವ್ಯಕ್ತಿಯ ವಾರಸುದಾರರು, ಮಾಹಿತಿ ಇದ್ದಲ್ಲಿ ದೂರವಾಣಿ ಸಂಖ್ಯೆ 080-22943003 ಅನ್ನು ಸಂಪರ್ಕಿಸಬಹುದು ಎಂದು ಹಲಸೂರು ಗೇಟ್ ಪೊಲೀಸ್ ಠಾಣೆ ಎಸ್ಸೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story