ದಾವಣಗೆರೆ: ಟ್ಯೂಷನ್‍ಗೆ ತೆರಳಿದ್ದ ಅಪ್ರಾಪ್ತೆಯ ಅತ್ಯಾಚಾರ ಯತ್ನ; ಆರೋಪಿ ಸೆರೆ

ದಾವಣಗೆರೆ,ನ30: ಮನೆ ಪಾಠಕ್ಕೆ ತೆರಳಿದ್ದ ಅಪ್ರಾಪ್ತೆ ಮೇಲೆ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಇಲ್ಲಿನ ನಿಟುವಳ್ಳಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನಿಟುವಳ್ಳಿ ವಾಸಿ ಅಝೀಝ್ (58) ಬಂಧಿತ ಆರೋಪಿ. ಮನೆ ಪಾಠಕ್ಕೆಂದು ಬಂದಿದ್ದ 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ವೃದ್ಧ ಅಝೀಝ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ತಪ್ಪಿಸಿಕೊಂಡು ಮನೆಗೆ ಹೋದ ಬಾಲಕಿ ತನ್ನ ಪಾಲಕರಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ಅಝೀಝ್ನ ಮಗ ತಮ್ಮ ಮನೆಯಲ್ಲೇ ಶಾಲಾ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದನು. ಎಂದಿನಂತೆ ಅಝೀಝ್ನ ಮನೆಗೆ ಟ್ಯೂಷನ್‍ಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಆರೋಪಿ ಅಝೀಝ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ವೃದ್ಧನ ದುರ್ವರ್ತನೆಯಿಂದ ತೀವ್ರ ಭಯಭೀತಳಾದ ಬಾಲಕಿ ತಕ್ಷಣವೇ ತನ್ನ ಪಾಲಕರಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ಮಹಿಳಾ ಠಾಣೆಗೆ ತೆರಳಿ, ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೃದ್ಧ ಅಝೀಝ್ ರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
Next Story





