3 ಚಂದ್ರ ಕಲ್ಲುಗಳು 6 ಕೋಟಿ ರೂ.ಗೆ ಹರಾಜು

ನ್ಯೂಯಾರ್ಕ್, ನ. 30: 1970ರಲ್ಲಿ ಸೋವಿಯತ್ ಬಾಹ್ಯಾಕಾಶ ಯಾನಿಗಳು ಚಂದ್ರನ ನೆಲದಿಂದ ತಂದಿದ್ದ ಮೂರು ಕಲ್ಲುಗಳು ಗುರುವಾರ ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ 8,55,000 ಡಾಲರ್ (ಸುಮಾರು 6 ಕೋಟಿ ರೂಪಾಯಿ)ಗೆ ಮಾರಾಟವಾಗಿವೆ.
ಅಮೆರಿಕನ್ ವ್ಯಕ್ತಿಯೋರ್ವ ಈ ಚಂದ್ರ ಕಲ್ಲುಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಅವರು ಈ ಕಲ್ಲುಗಳನ್ನು 1993ರಲ್ಲಿ ನಡೆದ ಹರಾಜಿನಲ್ಲಿ 4,42,500 ಡಾಲರ್ (ಸುಮಾರು 3.09 ಕೋಟಿ ರೂಪಾಯಿ)ಗೆ ಖರೀದಿಸಿದ್ದರು.
ಇನ್ನೋರ್ವ ಅಮೆರಿಕನ್ ವ್ಯಕ್ತಿ ಈ ಕಲ್ಲುಗಳನ್ನು ಖರೀದಿಸಿದ್ದಾರೆ ಎಂದು ಹರಾಜು ಸಂಸ್ಥೆ ‘ಸೋದ್‌ಬಿ’ ತಿಳಿಸಿದೆ. ಈ ಚಂದ್ರ ಕಲ್ಲುಗಳು ಆರಂಭದಲ್ಲಿ ಸೋವಿಯತ್ ಬಾಹ್ಯಾಕಾಶ ಕಾರ್ಯಕ್ರಮ ನಿರ್ದೇಶಕ ಸರ್ಗೀ ಪವ್ಲೊವಿಚ್ ಕೊರೊಲೆವ್‌ರ ಪತ್ನಿ ನಿನಾ ಇವಾನೊವ್ನ ಬಳಿಯಿತ್ತು.
Next Story





