ನೈಜೀರಿಯಾದಲ್ಲಿ ತುಳು ಕೂಟ ಸಮಾರಂಭ

ಮಂಗಳೂರು/ನೈಜೀರಿಯಾ, ನ. 30: ನೈಜೀರಿಯಾದ ಲೋಗೋಸ್‌ನಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ತುಳುವ ಬಂಧುಗಳೆಲ್ಲರೂ ಸೇರಿ ಇತ್ತೀಚೆಗೆ ‘ತುಳು ಕೂಟ’ ಸಮಾರಂಭವನ್ನು ಏರ್ಪಡಿಸಿದ್ದರು.
ಇದು 18ನೇ ವರ್ಷದ ಕಾರ್ಯಕ್ರಮವಾಗಿದ್ದು, ಬಾಲಕರು-ಹಿರಿಯರು ಸಹಿತ 100ಕ್ಕೂ ಅಧಿಕ ಮಂದಿ ತುಳುವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ವರ್ಷದೊಳಗಿನ ಪುಟಾಣಿಗಳಿಂದ ‘ರಾಧಕೃಷ್ಣ ನೃತ್ಯ’ ಪ್ಯೂಷನ್ ಡಾನ್ಸ್, ಸಂಗೀತ, ಛದ್ಮವೇಷ, ಸ್ವಾಗತ ನೃತ್ಯ ಹಾಗೂ ‘ಕಾಸ್’ ‘ಏರಾ ಉಲ್ಲೆರ್‌ಗೆ’ ಎನ್ನುವ 2 ಸ್ಕಿಟ್‌ಗಳನ್ನು ಪ್ರದರ್ಶಿಸಲಾಯಿತು.
Next Story