ಪ್ರೊ ಕಬಡ್ಡಿ: ದಿಲ್ಲಿಗೆ ಭರ್ಜರಿ ಜಯ

ಹೊಸದಿಲ್ಲಿ, ನ.30: ಮಿರಾಝ್ ಶೇಕ್ ಅತ್ಯುತ್ತಮ ಪ್ರದರ್ಶನ ನೆರವಿನಿಂದ ದಿಲ್ಲಿ ದಬಾಂಗ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ 48-35 ಅಂಕಗಳ ಅಂತರದಿಂದ ಮಣಿಸಿತು. ದಿಲ್ಲಿ ಪರ ಮಿರಾಝ್ 15 ಅಂಕ ಗಳಿಸಿದರು. ಜೈಪುರ ಪರ ದೀಪಕ್ ಹೂಡಾ 20 ಅಂಕ ಗಳಿಸಿದರೂ ತಂಡಕ್ಕೆ ಗೆಲುವು ಲಭಿಸಲಿಲ್ಲ.
ಇದೇ ವೇಳೆ ದಿನದ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳ ನಡುವಿನ ಹೋರಾಟ 35-35 ಅಂತರದಿಂದ ಡ್ರಾನಲ್ಲಿ ಕೊನೆಗೊಂಡಿದೆ.
ತಮಿಳ್ ಪರ ಅಜಯ್ ಠಾಕೂರ್ 16 ಅಂಕ ಕಲೆ ಹಾಕಿದರೆ, ಪಾಟ್ನಾ ಪರ ನಾಯಕ ಪರ್ದೀಪ್ ನರ್ವಾಲ್ 11 ಅಂಕ ಗಳಿಸಿದರು.
Next Story





