ತೆಲಂಗಾಣ ಚುನಾವಣೆ ಪ್ರಚಾರ: ಆಸ್ಕರ್, ಯು.ಟಿ.ಖಾದರ್ ಹೈದರಾಬಾದ್‌ಗೆ

ಮಂಗಳೂರು, ನ.30: ತೆಲಂಗಾಣ ವಿಧಾನಸಭಾ ಚುನಾವಣೆಯ ಕಾರ್ಯದ ಪ್ರಚಾರ ಮತ್ತು ಉಸ್ತುವಾರಿಗೆ ತಕ್ಷಣ ತಲುಪಬೇಕೆಂದು ಎಐಸಿಸಿಯಿಂದ ಬಂದ ಆದೇಶದಂತೆ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ದಿಢೀರ್ ಮಂಗಳೂರಿನಿಂದ ಹೈದರಾಬಾದ್‌ಗೆ ತೆರಳಲಿದ್ದಾರೆ.
ಶುಕ್ರವಾರ ಸಚಿವ ಖಾದರ್ ಮಂಗಳೂರಿನಲ್ಲಿದ್ದರು. ಶನಿವಾರ ಬೆಳಗ್ಗೆ ಹೈದರಾಬಾದ್ ತಲುಪಬೇಕೆಂದು ಎಐಸಿಸಿಯಿಂದ ತುರ್ತು ಸಂದೇಶ ಬಂದಿದ್ದು, ಖಾದರ್ ತಡರಾತ್ರಿ ರಸ್ತೆ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ಅಲ್ಲಿಂದ ಮುಂಜಾನೆ ವಿಮಾನ ಮೂಲಕ ಹೈದರಾಬಾದ್‌ಗೆ ತೆರಳಲಿದ್ದಾರೆ. ಇದರಿಂದ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ತೆಲಂಗಾಣ ಚುನಾವಣೆಯ ಪ್ರಚಾರ ಸಂಬಂಧ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಹೈದರಾಬಾದ್ ಗೆ ತೆರಳಲಿದ್ದಾರೆ.
Next Story