ಎಸ್ ಡಿ ಪಿ ಐ ಬೆಂಗರೆ ವಾರ್ಡ್ ಸಮಿತಿಯಿಂದ ಸದಸ್ಯತ್ವ ಅಭಿಯಾನ

ಮಂಗಳೂರು, ಡಿ. 1: ಎಸ್ ಡಿ ಪಿ ಐ ಬೆಂಗರೆ ವಾರ್ಡ್ ಸಮಿತಿಯಿಂದ ಸದಸ್ಯತ್ವ ಅಭಿಯಾನ "ಜನಪರ ರಾಜಕೀಯ ಭಾಗವಾಗಿರಿ ಎಸ್.ಡಿ.ಪಿ.ಐ ಯೊಂದಿಗೆ ಮುಂದೆ ಸಾಗಿರಿ'' ಎಂಬ ಘೋಷಣೆಯೊಂದಿಗೆ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಬೆಂಗರೆ ಎಸ್ ಡಿ ಪಿ ಐ ವಾರ್ಡ್ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.
ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಬೆಂಗರೆಯ ಹಲವಾರು ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು. ಮುನೀಬ್ ಬೆಂಗರೆ ಸಂದೇಶ ಬಾಷಣ ಮಾಡಿ, ಪ್ರಸಕ್ತ ಸನ್ನಿವೇಶ ಮತ್ತು ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ವಿವರಿಸಿದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಉಪಾಧ್ಯಕ್ಷ ಸಿದ್ದೀಕ್ ಬೆಂಗರೆ ಹಾಗೂ ವಾರ್ಡ್ ಉಪಾಧ್ಯಕ್ಷ ಅಶ್ರಫ್ ಧ್ವಜ ಹಸ್ತಾಂತರಿಸುವ ಮುಖಾಂತರ ಹೊಸ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭ ಬೆಂಗರೆ ವಾರ್ಡ್ ಅಧ್ಯಕ್ಷ ಶಹದಾಬ್, ಕಾರ್ಯದರ್ಶಿ ಇಮ್ತಿಯಾಝ್, ಜೊತೆ ಕಾರ್ಯದರ್ಶಿ ಇಮ್ತಿಯಾಝ್ ಡಿ ಎಕ್ಸ್ ಉಪಸ್ಥಿತರಿದ್ದರು.
Next Story