ಪ್ರತ್ಯೇಕತಾವಾದಿ ಮುಖಂಡ ಫಾರೂಕ್‌ಗೆ ಗೃಹಬಂಧನ

ಶ್ರೀನಗರ, ಡಿ.1:ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ, ಹುರಿಯತ್ ಕಾನ್ಫರೆನ್ಸ್(ಎಂ)ನ ಅಧ್ಯಕ್ಷ ಮಿರ್‌ವೈಝ್ ಉಮರ್ ಫಾರೂಕ್‌ರನ್ನು ಶನಿವಾರ ಗೃಹಬಂಧನದಲ್ಲಿರಿಸಲಾಗಿದ್ದು, ಸಂಘಟನೆಯ ಒಂದು ದಿನದ ಅಧಿವೇಶನ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಬಂಧನವನ್ನು ದೃಢಪಡಿಸಿ ಟ್ವೀಟ್ ಮಾಡಿರುವ ಫಾರೂಕ್, ತನ್ನ ನಿವಾಸದ ಹೊರಗೆ ಹಾಗೂ ಹುರಿಯತ್‌ನ ರಾಜ್‌ಭಾಗ್ ಕಚೇರಿಯ ಹೊರಭಾಗದಲ್ಲಿ ಪೊಲೀಸ್ ಸಿಬ್ಬಂದಿಗಳು ಇರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಹುರಿಯತ್ ಕಾರ್ಯಕರ್ತರ ಒಂದು ದಿನದ ಅಧಿವೇಶನವನ್ನು ವಿಫಲಗೊಳಿಸಲಾಗಿದ್ದು ಮತ್ತೆ ಗೃಹಬಂಧನ ವಿಧಿಸಲಾಗಿದೆ. ಹುರಿಯತ್‌ನ ರಾಜ್‌ಭಾಗ್ ಕಚೇರಿಯನ್ನು ಸೀಲ್ ಮಾಡಲಾಗಿದ್ದು ಯಾವುದೇ ರಾಜಕೀಯ ಚಟುವಟಿಕೆಗೆ ಅವಕಾಶ ಅಥವಾ ಆಸ್ಪದ ನೀಡಲಾಗುತ್ತಿಲ್ಲ. ಗವರ್ನರ್ ಸಾಹೇಬರು(ರಾಜ್ಯಪಾಲರು) ಅತ್ಯಂತ ಪ್ರಾಮಾಣಿಕವಾಗಿ ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಫಾರೂಕ್ ಟ್ವೀಟ್ ಮಾಡಿದ್ದಾರೆ.
Next Story





