ಮರಾಠಾ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

ಮುಂಬೈ, ಡಿ.1: ಮರಾಠಾ ಸಮುದಾಯಕ್ಕೆ ಮತ್ತು ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಶೇ. 16ರಷ್ಟು ಮೀಸಲಾತಿ ಒದಗಿಸುವ ಮಸೂದೆಗೆ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಶುಕ್ರವಾರ ಅಂಕಿತ ಹಾಕಿರುವುದಾಗಿ ರಾಜಭವನದ ಮೂಲಗಳು ತಿಳಿಸಿವೆ.
ರಾಜ್ಯದ ಸುಮಾರು 13 ಕೋಟಿ ಜನಸಂಖ್ಯೆಯ ಶೇ.33ರಷ್ಟಿರುವ ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕೆಂಬ ದೀರ್ಘಾವಧಿಯ ಬೇಡಿಕೆಗೆ ಗುರುವಾರ ವಿಧಾನಸಭೆಯ ಎರಡೂ ಸದನಗಳಲ್ಲಿ ಅವಿರೋಧ ಬೆಂಬಲ ವ್ಯಕ್ತವಾಗಿತ್ತು. ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಈಗ ನೀಡಲಾಗುತ್ತಿರುವ ಮೀಸಲಾತಿಯ ಹೊರತಾಗಿ ಮರಾಠರಿಗೆ ಮೀಸಲಾತಿ ನೀಡಲಾಗುವುದು.
ಮರಾಠರಿಗೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ರಾಜ್ಯದ ಹಿಂದುಳಿದ ವರ್ಗದ ಆಯೋಗದ ಶಿಫಾರಸು ಹಾಗೂ ವರದಿಯನ್ನು ಹಾಗೂ ಕೈಗೊಂಡಿರುವ ಕ್ರಮದ ವರದಿಯನ್ನು ವಿಧಾನಸಭೆಯಲ್ಲಿ ಸರಕಾರ ಮಂಡಿಸಿತ್ತು. ಆಯೋಗದ ವರದಿಯ ಆಧಾರದಲ್ಲಿ , ಮರಾಠಾ ಸಮುದಾಯವು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ಜನರನ್ನು ಹೊಂದಿರುವ ಸಮುದಾಯವಾಗಿದೆ ಎಂದು ಸರಕಾರ ಘೋಷಿಸಿದೆ.
Next Story





