ಡಿ.19-20: ಶಕ್ತಿ ಎಜುಕೇಶನ್ ಫೆಸ್ಟ್

ಮಂಗಳೂರು, ಡಿ.1: ಶಕ್ತಿನಗರದ ಶಕ್ತಿ ಎಜುಕೇಶನ್ ಟ್ರಸ್ಟ್ ನ ಶಕ್ತಿ ವಸತಿಯುಕ್ತ ಶಾಲೆಯ ವತಿಯಿಂದ ಡಿ.19 ಮತ್ತು 20ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಒಂದರಿಂದ ಹತ್ತನೆಯ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ‘ಶಕ್ತಿ ಫೆಸ್ಟ್ 2018’ನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶಕ್ತಿ ಫೆಸ್ಟ್ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಒಂದು ಮತ್ತು ಎರಡನೆ ತರಗತಿಯ ವಿದ್ಯಾರ್ಥಿಗಳಿಗೆ ವಿಭಾಗ ಒಂದು , 3ಮತ್ತು 4ನೆ ತರಗತಿಯ ವಿದ್ಯಾರ್ಥಿಗಳಿಗೆ ವಿಭಾಗ ಎರಡು,5.6.7ನೆ ತರಗತಿಯ ವಿದ್ಯಾರ್ಥಿಗಳಿಗೆ ವಿಭಾಗ ಮೂರು,ಮತ್ತು 8,9,10ನೆ ತರಗತಿಗೆ ನಾಲ್ಕನೆ ವಿಭಾಗ ಮಾಡಲಾಗಿದೆ.ಪ್ರತಿ ವಿಭಾಗದಲ್ಲೂ ತಲಾ 10 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು ಸೇರಿದಂತೆ ಒಟ್ಟು 1,25,00 ರೂ ಮೊತ್ತದ ಬಹುಮಾನ ನೀಡಲಾಗುವುದು.
ಶಕ್ತಿ ಫೆಸ್ಟ್ 2018ರಲ್ಲಿ ಇಂಗ್ಲೀಷ್, ಕನ್ನಡ, ಹಿಂದಿ ಭಾಷೆಗಳ ಹಾಡುಗಳನ್ನು ಹಾಡುವುದು, ನಟಿಸುವುದು, ಕತೆ ಹೇಳುವುದು, ಚಿತ್ರಕಲೆ, ಕನ್ನಡ ಭಾವಗಾನ, ಕಸದಿಂದ ರಸ, ಕೊಲಾಝ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಛದ್ಮವೇಶ, ಸ್ಪೆಲ್ ಬೀ, ರಸಪ್ರಶ್ನೆ, ಕನ್ನಡ , ಹಿಂದಿ, ಇಂಗ್ಲೀಷ್ ಭಾಷಣ,ದಾಸರ ಪದಗಳು, ಪೋಸ್ಟರ್ ಮೇಕಿಂಗ್, ಬೆಂಕಿ ಇಲ್ಲದೆ ಅಡುಗೆ, ಸಾಯನ್ಸ್ ಪ್ರಾಜೆಕ್ಟ್ ಮೊದಲಾದ ಸ್ಪರ್ಧೆಗಳಲ್ಲಿ ಒಂದು ಸಂಸ್ಥೆಯಿಂದ ಓರ್ವ ವಿದ್ಯಾರ್ಥಿ, ತಂಡದ ಸ್ಪರ್ಧೆಗಳಲ್ಲಿ ಒಂದು ತಂಡ ಮಾತ್ರ ಭಾಗವಹಿಸಬಹುದಾಗಿದೆ. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಉಚಿತ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗುವುದು ಎಂದು ಜನಾರ್ದನ ಆಚಾರ್ ತಿಳಿಸಿದ್ದಾರೆ.
ಶಕ್ತಿ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಮುರಳೀಧರ ನಾಯ್ಕಿ ಫೆಸ್ಟ್‌ನ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿದರು.ಸುದ್ದಿಗೋಷ್ಠಿಯಲ್ಲಿ ಶಕ್ತಿ ವಸತಿ ಶಾಲೆಯ ಸಂಸ್ಥಾಪಕ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಯ್ಕಾ,ಶಕ್ತಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್,ಶಕ್ತಿ ವಸತಿಯುಕ್ತ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು,ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್.ಕೆ,ಟ್ರಸ್ಟಿ ಮುರಳೀಧರ ನಾಯ್ಕಿ ಮೊದಲಾದವರು ಉಪಸ್ಥಿತರಿದ್ದರು.







