ತಣ್ಣೀರು ಬಾವಿ ಬೀಚ್ ನಲ್ಲಿ ಸೂಕ್ತ ರಕ್ಷಣೆಗೆ ಸಮಾಲೋಚನೆ: ಭೋಜೇಗೌಡ
ಮಂಗಳೂರು, ಡಿ.1: ತಣ್ಣೀರು ಬಾವಿ ಬೀಚ್ ನಲ್ಲಿ ಸಾರ್ವಜನಿಕರ ಮತ್ತು ಪ್ರವಾಸಿ ಗಳಿಗೆ ಸೂಕ್ತ ರಕ್ಷಣೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಔಟ್ ಪೋಸ್ಟ್ ಮಾಡಬೇಕು ಈ ಬಗ್ಗೆ ಮುಖ್ಯ ಮಂತ್ರಿ ಜೊತೆಗೆ ಸಮಾಲೋಚನೆ ಮಾಡುವ ವುದಾಗಿ ವಿಧಾನ ಪರಿಷತ್ ಸದಸ್ಯ ಎಸ್. ಎನ್.ಭೋಜೇ ಗೌಡ ತಿಳಿಸಿದ್ದಾರೆ.
ನ.18ರಂದು ತಣ್ಣೀರು ಬಾವಿ ಬೀಚ್‌ಗೆ ಬಂದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಬೇಕು.ಈ ಪ್ರಕರಣದಲ್ಲಿ ಬಂಟ್ವಾಳ ತಾಲೂಕಿನ ಪೊಲೀಸರು ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಯುವತಿ ದೂರು ನೀಡಲು ಬಂದಾಗ ಇದ್ದ ಇಬ್ಬರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು.ಈಗ ಒಬ್ಬ ಪೊಲೀಸರ ಅಧಿಕಾರವನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡುವ ಮೂಲಕ ಅವರಿಗೆ ಶಿಕ್ಷೆ ನೀಡಿದಂತಾಗುವುದಿಲ್ಲ. ಈ ಪ್ರಕರಣಕ್ಕೆ ಕಾರಣರಾದ ಇಬ್ಬರು ಪೊಲೀಸರನ್ನು ತಮ್ಮ ಹುದ್ದೆಯಿಂದಲೇ ವಜಾ ಮಾಡಬೇಕು ಎಂದು ಭೋಜೇ ಗೌಡ ತಿಳಿಸಿದ್ದಾರೆ.
ಸಂತ್ರಸ್ತ ಯುವತಿಗೆ ಸಮಾಜ ಕಲ್ಯಾಣ ಇಲಾಖೆ ಯಿಂದ 2 ಲಕ್ಷ ರೂ. ಹಾಗೂ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೀಡಲಾಗುವುದು ಎಂದು ಭೋಜೇ ಗೌಡ ತಿಳಿಸಿದ್ದಾರೆ.
ಮಂಗಳೂರಿನ ಪ್ರವಾಸೋಧ್ಯಮ ಬೆಳವಣಿಗೆಗೆ ತಣ್ಣೀರು ಬಾವಿಯ ಪ್ರಕರಣ ಮಾರಕವಾಗಿದೆ. ಈ ರೀತಿಯ ಘಟನೆ ನಡೆದಂತೆ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಜಾಗ್ರತವಾಬೇಕು. ಇಂತಹ ಘಟನೆ ಇಡೀ ಊರಿಗೆ ಕೆಟ್ಟ ಹೆಸರು ತರುತ್ತದೆ. ಈ ಪ್ರದೇಶದಲ್ಲಿ ಈ ಹಿಂದೆಯೂ ಕೆಲವು ಇಂತಹ ಘಟನೆ ನಡೆದಿವೆ. ಅವುಗಳು ಮುಚ್ಚಿಹೋಗಿದೆ ಎನ್ನುವ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಒಂದು ಔಟ್ ಪೋಸ್ಟ್ ನಿರ್ಮಿಸಲು ಪೊಲೀಸ್ ಆಯುಕ್ತ್ ರ ಜೊತೆ ಸಮಾಲೋಚನೆ ನಡೆಸಿರುವುದಾಗಿ ಭೋಜೇಗೌಡ ತಿಳಿಸಿದ್ದಾರೆ.