ಪಡುಬಿದ್ರಿಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಪಡುಬಿದ್ರಿ, ಡಿ. 1: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಪಡುಬಿದ್ರಿ ಘಟಕದ ವತಿಯಿಂದ ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ "ಜೈ ಭೀಮ್ ಟ್ರೋಫಿ-2018" ಶನಿವಾರ ಚಾಲನೆ ನೀಡಲಾಯಿತು.
ಪಡುಬಿದ್ರಿ ದಸಂಸ ಸಂಚಾಲಕ ಲೋಕೇಶ್ ಕಂಚಿನಡ್ಕ ಮಾತನಾಡಿ, ಸಮಾಜದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಓರ್ವ ಉತ್ತಮ ಕ್ರೀಡಾಪಟುವನ್ನಾಗಿ ಮಾಡುವುದು ಗುರಿಯಾಗಿದೆ. ಅಲ್ಲದೆ ಸಮಾಜದಲ್ಲಿ ಅನಾರೋಗ್ಯ ಪೀಡಿತರ ನೆರವಿಗಾಗಿ ಬಳಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್ ಫಲಿಮಾರು, ಕೆಪಿಸಿಸಿಯ ಸಂಚಾಲಕ ಭಾಸ್ಕರ್ ಪಡುಬಿದ್ರಿ, ಉಚ್ಚಿಲ ಶಾಖೆಯ ದಸಂಸ ಪ್ರಧಾನ ಸಂಚಾಲಕ ದಿನಕರ ಉಚ್ಚಿಲ, ಗ್ರಾಮ ಪಂಚಾಯಿತಿ ಸದಸ್ಯರಾದ ಬುಡಾನ್ ಸಾಹೇಬ್, ನವೀನ್ ಎನ್.ಶೆಟ್ಟಿ, ದಿನೇಶ್ ಕೋಟ್ಯಾನ್, ನಯನ, ದಸಂಸ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಸಂತಿ ಮತ್ತಿತರರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾಟದಲ್ಲಿ ಎಸ್‍ಸಿ, ಎಸ್‍ಟಿ ಸಮಾಜದ ರಾಜ್ಯದಾದ್ಯಂತ 30 ತಂಡಗಳು ಭಾಗವಹಿಸಲಿದ್ದು, ಪಂದ್ಯಾಟದಲ್ಲಿ ಪ್ರಥಮ ಟ್ರೋಫಿಯೊಂದಿಗೆ ನಗದು ರೂ.44,444 ಮತ್ತು ದ್ವಿತೀಯ ಟ್ರೋಫಿಯೊಂದಿಗೆ ನಗದು ರೂ.22,222 ಬಹುಮಾನಗಳಿವೆ.