ಅಕ್ರಮ ಶ್ರೀಗಂಧ ಸಾಗಾಟ: ಇಬ್ಬರ ಬಂಧನ, ವಾಹನ ವಶಕ್ಕೆ

ಹೆಬ್ರಿ, ಡಿ.1: ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಎರಡು ವಾಹನಗಳು ನ.30ರಂದು ಸೋಮೇಶ್ವರ ಚೆಕ್‌ಪೋಸ್‌ನಲ್ಲಿ ಹೆಬ್ರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಅಪಘಾತಕ್ಕೀಡಾದ ಎರಡು ವಾಹನ ವಶಪಡಿಸಿ, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಗುಂಬೆ ಕಡೆಯಿಂದ ನ.30ರ ರಾತ್ರಿ 10ಗಂಟೆಗೆ ರಿಡ್ಜ್ ಕಾರು ಹಾಗೂ ಡಿ.1ರ 3ಗಂಟೆ ಸುಮಾರಿಗೆ ಹೆಬ್ರಿ ಕಡೆಯಿಂದ ಸ್ಕಾರ್ಪಿಯೋ ಕಾರನ್ನು ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರು. ಆದರೆ ಎರಡು ಕಾರುಗಳು ನಿಲ್ಲಿಸದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬ್ಯಾರಿಕೇಟ್ಗೆ ಢಿಕ್ಕಿ ಹೊಡೆದು ಪರಾರಿಯಾಯಿತ್ತೆನ್ನಲಾಗಿದೆ.
ಅದರಲ್ಲಿ ರಿಡ್ಜ್ ಕಾರು ಹತೋಟಿ ತಪ್ಪಿ ಕಾಸನಮಕ್ಕಿ ರಸ್ತೆಯ ಚರಂಡಿಗೆ ಹಾಗೂ ಸ್ಕಾರ್ಪಿಯೋ ಕಾರು ಆಗುಂಬೆ ಘಾಟಿಯಲ್ಲಿ ಮುಗುಚಿ ಬಿತ್ತೆನ್ನ ಲಾಗಿದೆ. ರಿಡ್ಜ್ ಕಾರಿನಲ್ಲಿದ್ದ ಇಬ್ಬರು ಸಮೀಪದ ಕಾಡಿನೊಳಗೆ ಓಡಿ ತಪ್ಪಿಸಿ ಕೊಂಡಿದ್ದರು. ಈ ಎರಡೂ ವಾಹನಗಳನ್ನು ಪರಿಶೀಲಿಸಿದಾಗ ಎರಡರಲ್ಲೂ ಶ್ರೀಗಂಧದ ಕೊರಡುಗಳು ಪತ್ತೆಯಾಗಿವೆ.
ಪ್ರಕರಣ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ರಿಡ್ಜ್ ಕಾರಿನಲ್ಲಿದ್ದ ಬ್ರಹ್ಮಾವರದ ಯುವರಾಜ್ ಪೂಜಾರಿ ಹಾಗೂ ವಿನಯ್ ಎಂಬವರನ್ನು ಬಂಧಿಸಿದ್ದಾರೆ. ಇವರಿಂದ ಎರಡು ಕೆ.ಜಿ. ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ. ಸ್ಕಾರ್ಪಿಯೋ ಕಾರಿನಲ್ಲಿದ್ದ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇ ಪ್ರಕರಣಗಳು ದಾಖ ಲಾಗಿವೆ.